24.5 C
Kadaba
Thursday, March 20, 2025

ಹೊಸ ಸುದ್ದಿಗಳು

ಸುಳ್ಯದಲ್ಲಿ ಕಾಡು ಪ್ರಾಣಿ ಭೇಟೆ:ಮನೆಗೆ ನುಗ್ಗಿ ಬೇಯಿಸಿದ ಮಾಂಸ ಸಹಿತ ಆರೋಪಿಯನ್ನು ವಶಕ್ಕೆ ಪಡೆದ ಅರಣ್ಯಾಧಿಕಾರಿಗಳು

Must read

 

kadabatimes.in
ಕಾಡು ಪ್ರಾಣಿಯ ಮಾಂಸ ಮತ್ತು ಅರಣ್ಯಾಧಿಕಾರಿಗಳ ತಂಡ


kadabatimes.in

ಕಡಬ
ಟೈಮ್, ಸುಳ್ಯ:  
 ಕಾಡು
 ಪ್ರಾಣಿಯನ್ನು
ಬೇಟೆಯಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ  ಕೊಡಗು
ಸಂಪಾಜೆಯ ವಲಯ ಅರಣ್ಯಾಧಿಕಾರಿಗಳ ತಂಡ  ಭರ್ಜರಿ
ಕಾರ್ಯಾಚರಣೆ ನಡೆಸಿ ಮಾಂಸ ಸಹಿತ ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದು ಮತ್ತೋರ್ವ ಆರೋಪಿ ಪರಾರಿಯಾಗಿದ್ದಾನೆ.


ಅಕ್ಟೋಬರ್
23 ರಂದು ಬುಧವಾರ ರಾತ್ರಿ ಕಾಡು ಪ್ರಾಣಿ ಬೇಟೆಯಾಡಿದ ಖಚಿತ ಮಾಹಿತಿ ಮೇರೆಗೆ ಉಪ ಅರಣ್ಯ ಸಂರಕ್ಷಣಾಧಿಕಾರಿ
ಬಿ. ಭಾಸ್ಕರ್ ಹಾಗೂ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮೋಷಿನ್ ಪಾಷ ಮಾರ್ಗದರ್ಶನದಲ್ಲಿ ಉಪ ವಲಯ ಅರಣ್ಯಾಧಿಕಾರಿ
ದೇಚಮ್ಮ ಇವರ ಸಮ್ಮುಖದಲ್ಲಿ ದಾಳಿ ನಡೆಸಿದ್ದಾರೆ.


kadabatimes.in

ಪೆರಾಜೆಯ
ಪೆರುಮುಂಡದ ಗಂಗಾಧರ ಎಂಬವರನ್ನು  ವಶಕ್ಕೆ ಪಡೆದುಕೊಳ್ಳಲಾಗಿದೆ.
ಮತ್ತೋರ್ವ ತಲೆಮರೆಸಿಕೊಂಡಿರುವುದಾಗಿ
ಪ್ರಕಟಣೆಯಲ್ಲಿ
ತಿಳಿಸಲಾಗಿದೆ.


ಸದ್ಯ
ಮಾಂಸವನ್ನು ಎಫ್ ಎಸ್ ಎಲ್ ಪರೀಕ್ಷೆಗಾಗಿ  ಕಳುಹಿಸಿದ್ದು ಯಾವ ಪ್ರಾಣಿಯದ್ದು
ಅನ್ನುವುದು ಇನ್ನಷ್ಟೇ ತಿಳಿದು ಬರಬೇಕಿದೆ.

kadabatimes.in