

![]() ![]() |
ಬೆಳ್ಳಾರೆ ಪೇಟೆಯಲ್ಲಿ ಅಳೆದಾಡುತ್ತಿರುವ ಆಡುಗಳು |


ಬೆಳ್ಳಾರೆ:
ಪೇಟೆಗೆ, ಸಾರ್ವಜನಿಕ
ವಾಗಿ ಸಾಕು ಪ್ರಾಣಿಗಳನ್ನು ಅಲೆದಾಡಲು, ಮೇಯಲು ಬಿಡಬಾರದು ಎಂಬ ಸೂಚನೆಗಳನ್ನು ನೀಡುತ್ತಾ ಬರಲಾಗಿದ್ದರೂ ಸೂಚನೆ ಉಲ್ಲಂಸುವ ಸಾಕು ಪ್ರಾಣಿಗಳ ಮಾಲಕರಿಗೆ ದಂಡ ವಿಧಿಸಿ ಎಚ್ಚರಿಕೆ ನೀಡಲು ಬೆಳ್ಳಾರೆ ಗ್ರಾಮ ಪಂಚಾಯತ್ ಮುಂದಾಗಿದೆ.
ಬೆಳ್ಳಾರೆ
ಪೇಟೆಯಲ್ಲಿ ಆಡುಗಳನ್ನು ಬಿಡುತ್ತಿರುವುದರಿಂದ ಸಾರ್ವಜನಿಕರಿಗೆ ತೊಂದರೆ ಆಗುತ್ತಿರುವ ಬಗ್ಗೆ ಗ್ರಾಮ ಪಂಚಾಯತ್ ಗೆ ದೂರು ಸಲ್ಲಿಕೆಯಾಗಿತ್ತು.
ಅಲ್ಲದೆ ಯಾವುದೇ ಕಾರಣಕ್ಕೂ ಸಾಕುಪ್ರಾಣಿಗಳನ್ನು ಪೇಟೆಯಲ್ಲಿ ಅಲೆದಾಡಲು ಬಿಡದಂತೆ ಗ್ರಾ.ಪಂ. ಸೂಚನೆ ನೀಡಿತ್ತು. ಅದರೂ ಸೂಚನೆ ಉಲ್ಲ ಸಿದವರ ವಿರುದ್ಧ ಕ್ರಮಕ್ಕೆ ಆಡಳಿತ ಮುಂದಾಗಿದೆ.


ಪೇಟೆಗೆ
ಬಿಟ್ಟ ಆಡುಗಳನ್ನು ಗ್ರಾ.ಪಂ. ಕಟ್ಟಿ ಹಾಕಿ ಆಡಿನ ಮಾಲಕರಿಗೆ ದಂಡ ವಿಧಿಸಲಾಗಿದೆ. ಮುಂದೆಯೂ ಸೂಚನೆ ಉಲ್ಲಂ ಸುವುದು ಕಂಡು ಬಂದಲ್ಲಿ ದಂಡದ ಮೊತ್ತವನ್ನು ಇನ್ನಷ್ಟು ಹೆಚ್ಚಳ ಮಾಡಲಾಗುತ್ತದೆ ಎಂಬ ಎಚ್ಚರಿಕೆಯನ್ನು ಗ್ರಾ.ಪಂ. ನೀಡಿದೆ.
ಪೇಟೆಯಲ್ಲಿ
ಆಡುಗಳನ್ನು ಬಿಡದಂತೆ ಮೊದಲೇ ಸೂಚನೆ ನೀಡಲಾಗಿತ್ತು, ಆದರೂ ಮಾಲಕರು ಆಡನ್ನು ಪೇಟೆಗೆ ಬಿಟ್ಟಿದ್ದು, ಈ ಬಗ್ಗೆ ಸಾರ್ವಜನಿಕರು
ದೂರು ನೀಡಿದ್ದರು. ಅದರಂತೆ ಪೇಟೆಗೆ ಬಿಟ್ಟಿದ್ದ ಆಡನ್ನು ಕಟ್ಟಿ ಹಾಕಿ ಮಾಲಕರನ್ನು ಕರೆಸಿ ಅವರಿಗೆ ಮುಂದೆ ಆಡನ್ನು ಬಿಡದಂತೆ ಸೂಚಿಸಿ ದಂಡ ವಿಧಿಸಿ, ಆಡನ್ನು ಬಿಟ್ಟು ಕೊಡಲಾಗಿದೆ.
ಹೀಗೆಯೇ
ಮುಂದುವರಿದರೆ ದಂಡದ ಮೊತ್ತ ಹೆಚ್ಚುಗೊಳಿಸಲಾಗುವುದು. ಆಡಿನ ಮಾಲಕರು ಆಡನ್ನು ಪೇಟೆಗೆ ಬಿಡಬಾರದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

