![]() ![]() |
ನೀತಿ ಸಂಘಟನೆಯ ಸಕ್ರಿಯ ಸದಸ್ಯ ಶಶಿಧರನ್ ಎನ್ |




ನೆಲ್ಯಾಡಿ:
ನೀತಿ
ಸಂಘಟನೆಯ ಸಕ್ರಿಯ ಕಾರ್ಯಕರ್ತ, ಪಾಂಡಿಬೆಟ್ಟು ಶ್ರೀ
ನಾರಾಯಣ ಗುರುಮಂದಿರದ ಅಧ್ಯಕ್ಷ ಶಶಿಧರನ್ ಎನ್(63) ಹೃದಯಾಘಾತದಿಂದ
ಅ.21 ರಂದು ನಿಧನರಾಗಿದ್ದಾರೆ.


ಏಕಾಏಕಿ
ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತಾದರೂ ಅದಾಗಾಗಲೇ
ಅವರು ಮೃತಪಟ್ಟಿದ್ದರು. ಮೃತರು ಪತ್ನಿ , ಪುತ್ರರಾದ ಸುಭಾಷ್, ಸುನೀಶ್, ಸುಧೀಶ್ ಹಾಗೂ ಸೊಸೆಯಂದಿರನ್ನು
ಅಗಲಿದ್ದಾರೆ.
ಹಲವಾರು
ವರ್ಷಗಳಿಂದ ಪಾಂಡಿಬೆಟ್ಟು ಶ್ರೀ ನಾರಾಯಣ ಗುರುಮಂದಿರದ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿದ್ದರು. ಅಂತ್ಯ ಸಂಸ್ಕಾರದ ವೇಳೆ ರಾಜಕೀಯ, ಧಾರ್ಮಿಕ, ಸಾಮಾಜಿಕ ಮುಂದಾಳುಗಳು, ಸಾರ್ವಜನಿಕರು
ಮೃತರಿಗೆ ಅಂತಿಮ ನಮನ ಸಲ್ಲಿಸಿದರು.

