![]() ![]() |
ಗಾಳಿ ಮಳೆಗೆ ಬಿದ್ದಿರುವ ವೇದಿಕೆಯ ಸೀಟುಗಳು |




ಕಡಬ: ಮಹಾ ಮಳೆಗೆ ಕಡಬದ ಸೈಂಟ್ ಜೋಕಿಮ್ಸ್
ವಿದ್ಯಾಸಂಸ್ಥೆಗಳ ಕ್ರೀಡಾಂಗಣದಲ್ಲಿ ಜರಗುತ್ತಿದ್ದ ಕಡಬ
ವಲಯ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲಾ ಬಾಲಕ ಬಾಲಕಿಯರ ಎರಡನೇ ದಿನದ ಕ್ರೀಡಾಕೂಟ
ಅರ್ಧದಲ್ಲೇ ಸ್ಥಗಿತಗೊಂಡ ಘಟನೆ ವರದಿಯಾಗಿದೆ.
ರಿಲೆ
ಓಟ ಆರಂಭಗಾಗುತ್ತಿದ್ದಂತೆ ವರುಣಾರ್ಭಟ
ಜೋರಾಗಿ ಬಿರುಸಾದ ಗಾಳಿ ಬೀಸಿದೆ .ಸಿಡಿಲು ಸಹಿತ ಗಾಳಿ
ಮಳೆಗೆ ಕ್ರೀಡಾಂಗಣದಲ್ಲಿ ಹಾಕಿದ್ದ ವೇದಿಕೆಯ
ಶಾಮಿಯಾನದ ಕಂಬಗಳು ಏಕಾಏಕಿ ವಾಲಿಕೊಂಡು
ತಗಟು ಶೀಟುಗಳು ಕೆಳಕ್ಕೆ ಬಿದ್ದಿದಿದೆ. ಅಲ್ಲದೆ
ಕೆಲವು ಕಬ್ಬಿಣದ ಶೀಟುಗಳು ಹಾರಿ ಹೋಗಿ ಅಸ್ತವ್ಯಸ್ಥವಾಗಿದೆ.


ಬಿರುಸಾದ
ಮಳೆ ಬರುವುದನ್ನು ಗಮನಿಸಿದ ಆಯೋಜಕರು ವಿದ್ಯಾರ್ಥಿಗಳನ್ನು ಸುರಕ್ಷಿತ ಸ್ಥಳಕ್ಕೆ ಕಳುಹಿಸಿ ಸಂಭಾವ್ಯ
ಅಪಾಯವನ್ನು ತಪ್ಪಿಸಿದ್ದಾರೆ. ಹೈಸ್ಕೂಲ್
ವಿಭಾಗದ ಬಾಲಕ-ಬಾಲಕಿಯರ 4X100 ರಿಲೆ ಸಹಿತ ಪೈನಲ್ ಹಂತದ ಕೆಲವು ಕ್ರೀಡಾ ಸ್ಪರ್ಧೆಗಳು ಬಾಕಿಯಾಗಿವೆ.
ಇವೆಲ್ಲವನ್ನೂ ಗುರುವಾರ ಮುಂದುವರಿಯಲಿದೆ ಎಂಬ ಮಾಹಿತಿ ಲಭಿಸಿದೆ.

