

![]() ![]() |
ಕಾಲೇಜು ರಸ್ತೆಯುದ್ದಕೂ ಚರಂಡಿ ನೀರು ಹರಿಯುತ್ತಿರುವುದು |


ಕಡಬ: ಬಂಗಾಲಕೊಲ್ಲಿಯಲ್ಲಿ
ವಾಯುಭಾರ ಕುಸಿತ ಉಂಟಾಗಿದ್ದು ಚಂಡ ಮಾರುತ ಪ್ರಭಾವ
ಕರಾವಳಿ ಪ್ರೇಶಗಳಿಗೂ ತಟ್ಟಿದೆ.ದಕ್ಷಿಣ ಕನ್ನಡ ಜಿಲ್ಲೆಯ ಕಡಬ ಸೇರಿದಂತೆ ಬುಧವಾರ ಸಂಜೆ ಭಾರೀ ಮಳೆಯಾಗಿದೆ.
ಕಡಬದ
ಕಾಲೇಜು ರಸ್ತೆ ಕೆಸರು ಗದ್ದೆಯಂತಾಗಿದ್ದು ರಸ್ತೆಯ ಇಕ್ಕೆಲಗಳಲ್ಲಿ
ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದ ಕಾರಣ
ಮಳೆ ನೀರು ರಸ್ತೆಯಲ್ಲೇ
ಹರಿದಿದೆ. ಕಾಲೇಜು
ವಿದ್ಯಾರ್ಥಿಗಳು, ವಾಹನ ಸವಾರರು ಹರಸಾಹಸಪಟ್ಟ ಸಂಚರಿಸಿದರು.
ಇನ್ನು ಕಡಬ
ಸಮುದಾಯ ಆಸ್ಪತ್ರೆಯ ಬಳಿ ಎರಡು ವಸತಿಗೃಹಗಳಿಗೆ ನೀರು
ನುಗ್ಗಿದೆ. ಆಸ್ಪತ್ರೆಯ ಗೇಟ್ ಮುಂಭಾಗವೇ ಮೋರಿ ಅಳವಡಿಸಿದ
ಕಾರಣ ಚರಂಡಿ ನೀರು ಆಸ್ಪತ್ರೆಯ ಕಂಪೌಂಡಿನೊಳಗೆ ಬರುತ್ತಿದೆ.
ಹೀಗಾಗಿಯೇ ನೀರು ನುಗ್ಗಿದೆ, ಈ ಬಗ್ಗೆ ಆಸ್ಪತ್ರೆಯ ವೈದ್ಯಾಧಿಕಾರಿಗಳ ಮೂಲಕ ದೂರು ನೀಡಿದರೂ ಯಾವುದೇ
ಕ್ರಮ ಜರುಗಿಸಿಲ್ಲ ಎಂಬ ಆರೋಪ ವ್ಯಕ್ತವಾಗಿದೆ.


ಮರ್ದಾಳ ಪೇಟೆಯಲ್ಲೂ
ರಸ್ತೆ ಮೇಲೆಯೇ ಭಾರೀ ಪ್ರಮಾಣದಲ್ಲಿ ಮಳೆ ನೀರು ಹರಿದು ಹೋಗುತ್ತಿರುವ ವೀಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ
ಹಂಚಿಕೆಯಾಗುತ್ತಿದೆ. ಇದಲ್ಲದೆ ಕಳಾರ ಬಳಿ ವ್ಯಕ್ತಿಯೊಬ್ಬರು ಚರಂಡಿ ಕಬಳಿಸಿ ಕಟ್ಟಡ ನಿರ್ಮಿಸಿದ ಪರಿಣಾಮ ಕೃಷಿ ಗದ್ದೆಗಳಲ್ಲಿ ಭಾರೀ ಪ್ರಮಾಣದಲ್ಲಿ ನೀರು ಸಂಗ್ರಹವಾಗಿದೆ.

