

![]() ![]() |
ವಿದ್ಯುತ್ ಕಂಬ ಮುರಿದು ಬಿದ್ದು ಹಾನಿಯಾಗಿರುವುದು |


ಕಡಬ/ಮರ್ದಾಳ: ಇಲ್ಲಿನ ಉಪ್ಪಿನಂಗಡಿ-ಸುಬ್ರಹ್ಮಣ್ಯ ರಾಜ್ಯ
ಹೆದ್ದಾರಿಯ ಬದಿಗಳಲ್ಲಿ ಹೊಸ ವಿದ್ಯುತ್ ಕಂಬಗಳನ್ನು ಅಳವಡಿಕೆ ಮಾಡುತ್ತಿದ್ದು ಮರ್ದಾಳದಲ್ಲಿ ಹಾಕಿದ ಕಂಬವೊಂದು ಒಂದೇ ದಿನದಲ್ಲಿ ಹೊಸ ಕಂಬ ನೆರಕ್ಕುರುಳಿದ್ದು ಕಳೆಪೆ ಕಾಮಗಾರಿಯ
ಆರೋಪ ಕೇಳಿ ಬಂದಿದೆ.
ಮರ್ದಾಳ
ಸಮೀಪದ ಹಾಲು ಸೊಸೈಟಿ ಬಳಿ ಕಂಬಗಳು ಹಾದು ಹೋಗಿದ್ದು ಹೆದ್ದಾರಿ ಬದಿಯಲ್ಲೇ ಕಂಬ ಅಳವಡಿಸಲಾಗಿದೆ, ಆದರೆ
ಕಂಬ ಅಳವಡಿಸುವ ವೇಳೆ ನಿಗದಿತ ಪ್ರಮಾಣದಲ್ಲಿ ಗುಂಡಿ ತೋಡದೆ ಇರುವುದೇ ಕಂಬ ಬೀಳಲು ಕಾರಣವಾಗಿದೆ ಎಂದು ಸಾರ್ವಜನಿಕರು ಆಕ್ರೋಶ ಹೊರ ಹಾಕಿ ಗುತ್ತಿಗೆದಾರರ ಅಸಡ್ಡೆಯ ಕೆಲಸವೆಂದು ಆರೋಪಿಸಿದ್ದಾರೆ.


ಜನ
ಸಂಚಾರ ಇಲ್ಲದ ಕಾರಣ ಸಂಭಾವ್ಯ ಅಪಾಯ,ಜೀವ ಹಾನಿ ಸಂಭವಿಸಿಲ್ಲ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.
ಇದರ
ಮುಂದುವರಿದ ಭಾಗವಾಗಿ ಮುಂದಕ್ಕೆ ಮರಗಳ ಎಡೆಯಲ್ಲೇ ಕಂಬಗಳನ್ನು ಹಾಕಿರುವುದು ತಿಳಿದು ಬಂದಿದೆ. ಈ ಭಾಗದ ಕೃಷಿಕರ ವಿರೋಧ ನಡೆವೆಯೂ ಮೆಸ್ಕಾಂ ಇಲಾಖೆ ವಿದ್ಯುತ್
ತಂತಿ ಎಳೆಯಲು ಮುಂದಾಗಿದೆ ಎಂಬ ಆರೋಪವೂ ವ್ಯಕ್ತವಾಗಿದೆ.
ಎಕ್ಸ್ ಪ್ರೆಸ್ ಲೈನ್ ನಲ್ಲಿ
ವಿದ್ಯುತ್ ಶಾಕ್: ಆರು
ತಿಂಗಳ ಹಿಂದೆ ಇಲ್ಲಿನ ಕೃಷಿಕರೊಬ್ಬರ ತೋಟದಲ್ಲಿ ಜೆಸಿಬಿ ಕೆಲಸ ನಿರ್ವಹಿಸುವ ವೇಳೆ ಮರದ ಬಳ್ಳಿ ತೆಗೆಯುವಾಗ
ಜೆಸಿಬಿಗೆ ಕರೆಂಟ್ ಶಾಕ್ ಹೊಡೆದು ಅದರ ಚಾಲಕ ಪ್ರಾಣಾಪಾಯದಿಂದ ಪಾರಾಗಿರುವುದಾಗಿ ತಿಳಿದುಬಂದಿದೆ.
ಕಪ್ಪು ಬಣ್ಣದ ಕವರ್ ಇರುವ ಈ ಎಕ್ಸ್ ಪ್ರೆಸ್ ಲೈನ್ ನಲ್ಲಿ ವಿದ್ಯುತ್ ಶಾಕ್ ಬರುತ್ತಿರುವುದು ಆತಂಕಕ್ಕೆ
ಕಾರಣವಾಗಿದೆ.
ಮರ್ದಾಳ
ಪೇಟೆಯುದ್ದಕ್ಕೂ ಜೇಡರ ಬಲೆಯಂತೆ ವಿದ್ಯುತ್ ತಂತಿಗಳು ಹಾದು ಹೋಗಿವೆ . ಇನ್ನು ವಿದ್ಯುತ್
ಕಂಬ ಬಿದ್ದಿರುವ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೆಯಾಗುತ್ತಿದ್ದು “ ನಮ್ಮ ಅಧಿಕಾರಿಗಳ ನಿರ್ಲಕ್ಷದಿಂದ
ಆಗುವ ಕಳಪೆ ಕಾಮಗಾರಿ , ಇದರಿಂದ ಆಗುವ ಅನಾಹುತಕ್ಕೆ ಯಾರು ಹೊಣೆ? ಎಂಬ ಬರಹದೊಂದಿಗೆ ಹಂಚಿಕೆಯಾಗುತ್ತಿದೆ.

