



ಕಡಬ ಟೈಮ್, ಪುತ್ತೂರು ನಗರದ ಕೂರ್ನಡ್ಕದಲ್ಲಿ ಕಾರಿನಿಂದ ಇಳಿದು ರಸ್ತೆ ಬದಿ ನಿಂತಿದ್ದ ಬಾಲಕನಿಗೆ ಅಪರಿಚಿತರ ತಂಡವೊಂದು ಹಲ್ಲೆ ನಡೆಸಿದ ಘಟನೆ ಅ. 16ರ ತಡರಾತ್ರಿ ನಡೆದಿದೆ.


ಕಲ್ಲಡ್ಕದ ಲೈಟ್ಸ್ ಸೌಂಡ್ಸ್ಗೆ ಸಂಬಂಧಿಸಿದ ಬಾಲಕ ಹಲ್ಲೆಗೊಳಗಾದವ. ಕಾರ್ಯಕ್ರಮಕ್ಕೆ ಸಂಬಂಧಿಸಿ ಲೈಟಿಂಗ್ ಮಾಡಿ ಟೆಂಪೊ ಮತ್ತು ಕಾರಿನಲ್ಲಿ ಹಿಂದಿರುಗುತ್ತಿದ್ದ ವೇಳೆ ಕಾರಿನಲ್ಲಿದ್ದ ಬಾಲಕನೋರ್ವನಿಗೆ ವಾಂತಿ ಬರುವ ಅನುಭವವಾಗಿದ್ದು, ಹೀಗಾಗಿ ಕೂರ್ನಡ್ಕದ ಬಳಿ ಕಾರು ನಿಲ್ಲಿಸಲಾಗಿತ್ತು.
ಬಾಲಕ ರಸ್ತೆ ಬದಿ ನಿಂತಿದ್ದ ವೇಳೆ ಕಾರಿನಲ್ಲಿದ್ದವರು ಆತನಿಗೆ ಬಾಟಲಿಯಲ್ಲಿ ನೀರು ಕೊಡುತ್ತಿದ್ದು, ಈ ವೇಳೆ ಅಪರಿಚಿತರು ಬಂದು ಹಲ್ಲೆ ನಡೆಸಿದ್ದಾರೆ.

