35.1 C
Kadaba
Wednesday, March 19, 2025

ಹೊಸ ಸುದ್ದಿಗಳು

ಸುಳ್ಯ ವಿಧಾನ ಸಭಾ ಕ್ಷೇತ್ರ: ಅನಾರೋಗ್ಯ ಪೀಡಿತ ವೃದ್ಧನನ್ನು ಕುರ್ಚಿಯಲ್ಲಿ ಕೂರಿಸಿ ಎತ್ತಿಕೊಂಡು ಹೋದ ಯುವಕರು

Must read

 

kadabatimes.in
ವೃದ್ಧನನ್ನು ಕುರ್ಚಿಯಲ್ಲಿ ಕೂರಿಸಿ ಎತ್ತಿಕೊಂಡುಹೋಗುತ್ತಿರುವುದು

kadabatimes.in

ದಕ್ಷಿಣ ಕನ್ನಡ: ಜಿಲ್ಲೆಯಲ್ಲಿ
ಅದರಲ್ಲೂ ಸುಳ್ಯ ವಿಧಾನ ಸಭಾ ಕ್ಷೇತ್ರದಲ್ಲಿ ಗ್ರಾಮೀಣ ಭಾಗದಲ್ಲಿ ರಸ್ತೆ ಸಮಸ್ಯೆಗಳೇ ಹೆಚ್ಚು.ಇದೀಗ
ಸರಿಯಾದ
ರಸ್ತೆ ಸಂಪರ್ಕ ಇಲ್ಲದೆ ಅನಾರೋಗ್ಯ ಪೀಡಿತ ವೃದ್ಧರೊಬ್ಬರನ್ನು ಕುರ್ಚಿಯಲ್ಲಿ ಕೂರಿಸಿ ಎತ್ತಿಕೊಂಡು ಆಸ್ಪತ್ರೆಗೆ ಸೇರಿಸಿದ ಘಟನೆ ಸುಳ್ಯದ
ಗುತ್ತಿಗಾರು ಗ್ರಾಮದಿಂದ ವರದಿಯಾಗಿದೆ.


kadabatimes.in

ಗುತ್ತಿಗಾರಿನ ಮಡಪ್ಪಾಡಿ ಗ್ರಾಮದ ನಡುಬೆಟ್ಟಿನಲ್ಲಿ  ಸುಮಾರು ಹದಿನಾಲ್ಕು ಮನೆಗಳಿದ್ದು, ಅದನ್ನು ಸಂಪರ್ಕಿಸಲು ಇರುವ ಕಚ್ಚಾ ರಸ್ತೆ ಸಂಪೂರ್ಣ ಹದಗೆಟ್ಟಿದೆ. ಆದ್ದರಿಂದ ಯಾವುದೇ ವಾಹನಗಳ ಚಾಲಕರು ಇಲ್ಲಿಗೆ ಬರಲು ಒಪ್ಪುತ್ತಿಲ್ಲ.


ರಸ್ತೆಯಲ್ಲಿ ದೊಡ್ಡ ದೊಡ್ಡ ಹೊಂಡ ಗುಂಡಿಗಳಾಗಿರುವ ಕಾರಣ ಬೇಸಗೆಯಲ್ಲಿ ಮಾತ್ರ ಜೀಪು, ಪಿಕಪ್ಗ್ಳು ಮಾತ್ರ ಸಂಚರಿಸುತ್ತವೆ. ಮಳೆಗಾಲದಲ್ಲಿ ಯಾವ ವಾಹನಗಳೂ ಸಂಚರಿಸಲಾಗದ ಪರಿಸ್ಥಿತಿ ಇದೆ. ಹೀಗಾಗಿ ಎಲ್ಲ ರೀತಿಯ ಕೃಷಿ ಉತ್ಪನ್ನ ಮತ್ತು ಮನೆ ಬಳಕೆಯ ಸಾಮಗ್ರಿಗಳನ್ನು ಹೊತ್ತುಕೊಂಡೇ ಸಾಗಿಸಬೇಕಾದ ಸ್ಥಿತಿ ಇದೆ.

kadabatimes.in