35.1 C
Kadaba
Wednesday, March 19, 2025

ಹೊಸ ಸುದ್ದಿಗಳು

ಬಲ್ಯ ಸಮೀಪ ಹೆದ್ದಾರಿ ಬದಿಯಲ್ಲಿದ್ದ ಅಪಾಯಕಾರಿ ಮರದ ಕೊಂಬೆ ತೆರವು

Must read

kadabatimes.in

 

kadabatimes.in

ಬಲ್ಯ ಶ್ರೀ ಉಮಾಮಹೇಶ್ವರಿ ಪರಿವರ್ತನಾ ತಂಡದ ನೆರವು

ಕಡಬ :ಸುಬ್ರಹ್ಮಣ್ಯ-ಉಪ್ಪಿನಂಗಡಿ ರಾಜ್ಯ ಹೆದ್ದಾರಿಯ
ಕುಟ್ರುಪ್ಪಾಡಿ ಗ್ರಾ.ಪಂ ಬಲ್ಯ ಗ್ರಾಮದ ಕುದ್ರಡ್ಕ ಎಂಬಲ್ಲಿ ಹೆದ್ದಾರಿ ಬದಿಯಲ್ಲಿದ್ದ ಅಪಾಯಕಾರಿ
 ಮರದ ಕೊಂಬೆಯನ್ನು  ಅರಣ್ಯ ಇಲಾಖೆಯ ಸಿಬ್ಬಂದಿಗಳ ಸಹಾಕಾರದೊಂದಿಗೆ  ಬಲ್ಯ ಶ್ರೀ
ಉಮಾಮಹೇಶ್ವರಿ ಪರಿವರ್ತನಾ
ತಂಡದ ನೆರವಿರಲ್ಲಿ ತೆರವುಗೊಳಿಸಿದೆ.

 ಶ್ರೀ ಉಮಾಮಹೇಶ್ವರಿ ಪರಿವರ್ತನಾ ತಂಡದ ಸದಸ್ಯರು


kadabatimes.in

ವಾಹನ
ಸವಾರರಿಗೆ ಅಪಾಯಕಾರಿಯಾಗಿದ್ದ ಈ ಮರದ ಬಗ್ಗೆ ಸಾಮಾಜಿಕ ಜಾಲತಾಣಗಳ ಮೂಲಕ ಸಂಬಂಧ ಪಟ್ಟ ಅಧಿಕಾರಿಗಳ
ಗಮನಸೆಳೆಯಲಾಗಿತ್ತು. ಅಧಿಕಾರಿಗಳ ಸೂಕ್ತ ಸಮಯಕ್ಕೆ ಸ್ಪಂದಿಸದ ಬಗ್ಗೆ ಆಕ್ರೋಶವನ್ನೂ ವ್ಯಕ್ತಪಡಿಸಲಾಗಿತ್ತು
.

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದ ಸುದ್ದಿ ಗಮನಿಸಿ  ಐತ್ತೂರು ಗ್ರಾ.ಪಂ ಮಾಜಿ ಅಧ್ಯಕ್ಷ ಸತೀಶ್.ಕೆ ಅವರು ಸ್ಥಳೀಯರನ್ನು ಸಂಪರ್ಕಿಸಿದ್ದರು. ಬಳಿಕ   ಸಂಬಂಧಿಸಿದ   ಇಲಾಖೆಗೂ ಮಾಹಿತಿ ರವಾನಿಸಿದ್ದರು. ಹೀಗಾಗಿ  ಅಪಾಯಕಾರಿಯಾಗಿದ್ದ ಮರದ ಕೊಂಬೆ ತೆಗೆದು  ವಾಹನ ಸವಾರರು ನಿರಾಳರಾಗುವಂತೆ ಮಾಡಿದ್ದಾರೆ.

ತೆರವುಗೊಳಿಸಿರುವ ಮರದ ಕೊಂಬೆ


kadabatimes.in

ಅಪಾಯಕಾರಿ
ಮರದ ಕೊಂಬೆ ತೆರವುಗೊಳಿಸಿ ವಾಹನ ಸವಾರರಿಗೆ ಬಲ್ಯ ಶ್ರೀ
ಉಮಾಮಹೇಶ್ವರಿ ಪರಿವರ್ತನಾ
ತಂಡದ ಮುಂದಾಳು ಉಮೇಶ್ ಜಾಕಿ ಅವರು
ಕೃತಜ್ಞತೆ ಸಲ್ಲಿಸಿದ್ದಾರೆ . ಉಮಾಮಹೇಶ್ವರಿ ಪರಿವರ್ತನಾ ತಂಡದ ಸದಸ್ಯರು, ಅರಣ್ಯ ರಕ್ಷಕ ರವಿಕುಮಾರ್
ಸಹಕರಿಸಿದರು  .