23.4 C
Kadaba
Wednesday, March 19, 2025

ಹೊಸ ಸುದ್ದಿಗಳು

ಕಡಬ:ಹೊರ ರಾಜ್ಯದಲ್ಲಿ ತಲೆಮರೆಸಿಕೊಂಡಿದ್ದ ವಾರೆಂಟ್ ಆರೋಪಿಯನ್ನು ಬಂಧಿಸಿದ ಪೊಲೀಸರು:14 ದಿನಗಳ ನ್ಯಾಯಾಂಗ ಬಂಧನ

Must read

            ಬಂಧಿತ ಆರೋಪಿ

ಕಡಬ ಟೈಮ್ಸ್ ,ಕಡಬ :ಹಲವೆಡೆ ಕಳ್ಳತನ ಹಾಗೂ NDPS ಪ್ರಕರಣಗಳಲ್ಲಿ ಭಾಗಿಯಾಗಿ ಹೊರ ರಾಜ್ಯದಲ್ಲಿ ತಲೆ ಮರೆಸಿಕೊಂಡಿದ್ದ ವಾರೆಂಟ್ ಆರೋಪಿಯನ್ನು  ಕಡಬ ಪೊಲೀಸರು ಪತ್ತೆ ಹಚ್ಚಿ ದಸ್ತಗಿರಿ ಮಾಡಿದ್ದಾರೆ.
ಕಡಬ ತಾಲೂಕು ಕುಂತೂರು ನಿವಾಸಿ ರಾಝೀಕ್ ಅಲಿಯಾಸ್ ಎರ್ಮಾಳ ರಾಝಿಕ್ ಬಂಧಿತ ವಾರೆಂಟ್ ಆರೋಪಿ. 
ಕಳೆದ  ಒಂದು ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ  ತಲೆ ಮರೆಸಿಕೊಂಡಿದ್ದ
ಈತನನ್ನು ಅ. 10 ರಂದು ತಮಿಳುನಾಡಿನ ಕೊಯಂಬತ್ತೂರಿನಿಂದ ಪೊಲೀಸರು  ದಸ್ತಿಗಿರಿ ಮಾಡಿ ಪುತ್ತೂರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.
ಈತನ ಮೇಲೆ ದ.ಕ ಜಿಲ್ಲೆಯ ಕಡಬ ಠಾಣೆಯಲ್ಲಿ ಗಲಾಟೆ ಹಾಗೂ ಬೆದರಿಕೆ ಪ್ರಕರಣ,  ಪುತ್ತೂರು ನಗರ ಠಾಣೆಯಲ್ಲಿ ಶಶಸ್ತ್ರ ಕಾಯ್ದೆ, ಹಾಗೂ ಎನ್ ಡಿ ಪಿ ಎಸ್ ಕಾಯ್ದೆಯಡಿ ಕೇಸು,  ಸುಳ್ಯ , ಬಂಟ್ವಾಳ ನಗರ ಠಾಣೆ,ಕೊಣಾಜೆ,  ಪುಂಜಾಲಕಟ್ಟೆ ಠಾಣೆಯಲ್ಲಿ ಕಳ್ಳತನ ಪ್ರಕರಣ ದಾಖಲಾಗಿ ವಾರೆಂಟ್ ಆಗಿತ್ತು. 
ಉಪ್ಪಿನಂಗಡಿ ವೃತ್ತ ನಿರೀಕ್ಷರ ನಿರ್ದೇಶನಂತೆ ಕಡಬ  ಎಸ್.ಐ ಅಭಿನಂದನ್ ಅವರ ಮಾರ್ಗದರ್ಶನದಂತೆ  ಠಾಣಾ ಎಚ್.ಸಿ ರಾಜು ನಾಯ್ಕ್, ಪಿಸಿ ಸಿರಾಜುದ್ದೀನ್, ಪಿಸಿ ಪ್ರವೀಣ್ ಪತ್ತೆ ಹಚ್ಚಿ ದಸ್ತಿಗಿರಿ ಮಾಡಿದ್ದಾರೆ.

You cannot copy content of this page