ಸುಳ್ಯ: ಅಂಗನವಾಡಿ ಸಹಾಯಕಿಯಾಗಿ ಕೆಲಸ ನಿರ್ವಹಿಸುತ್ತಿದ್ದ ಮಹಿಳೆಯೋರ್ವರು
ಮನೆಯಲ್ಲಿ ಕುಸಿದು ಬಿದ್ದು ಮೃತಪಟ್ಟ ಘಟನೆ ಸುಳ್ಯದ
ಪೆರಾಜೆ ಗ್ರಾಮದಿಂದ ವರದಿಯಾಗಿದೆ.




ಪೆರಾಜೆ ಗ್ರಾಮ ಸಹಾಯಕರಾಗಿರುವ ಕುಂಡಾಡು ಚಾಮಕಜೆಯ ಪದ್ಮಯ್ಯ ಅವರ ಪತ್ನಿ ಶ್ರೀಮತಿ ರವಿಕಲಾ(36ವ)
ಮೃತಪಟ್ಟ ಮಹಿಳೆ.


ಕುಂಡಾಡು
ಚಾಮಕಜೆಯಲ್ಲಿ ಅ.8ರಂದು ಈ ಘಟನೆ ನಡೆದಿದ್ದು ರವಿಕಲಾ ಅವರಿಗೆ ಪಕ್ಷಪಾತ ಕಾಯಿಲೆಯಿದ್ದು, ಅದಕ್ಕೆ ಔಷದಿ ಪಡೆದು ಗುಣಮುಖರಾಗಿದ್ದರೆನ್ನಲಾಗಿದೆ.
ಅ.8ರಂದು ಮನೆಯಲ್ಲಿ ಹಠಾತ್ ಕುಸಿದು ಬಿದ್ದಾಗ ಅವರನ್ನು ಮನೆಯವರು ಮಂಗಳೂರಿನ ಸರಕಾರಿ ಆಸ್ಪತ್ರೆಗೆ ಕರೆದೊಯ್ದಾಗ ಅವರು ಕೊನೆಯುಸಿರೆಳೆದಿದ್ದರೆಂದು ತಿಳಿದುಬಂದಿದೆ. ಮೃತರು ಪತಿ ಸೇರಿದಂತೆ ಎರಡು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.

