ಕಡಬ: ಇಲ್ಲಿನ ಮರ್ಧಾಳದ
ಯುವ ಧಾರ್ಮಿಕ ವಿದ್ವಾಂಸರೊಬ್ಬರು ಅನಾರೋಗ್ಯದಿಂದ
ನಿಧನರಾಗಿದ್ದಾರೆ.




ಚಾಕಟೆಕೆರೆ ನಿವಾಸಿ ಹಮೀದ್ ಮುಸ್ಲಿಯಾರ್ ಎಂಬವರ ಪುತ್ರ ಅಬ್ದುಲ್ ರವೂಫ್ ಇರ್ಫಾನಿ ಅಲ್ ಮಖ್ದೂಮಿ (30) ನಿಧನರಾದವರು.


ಅನಾರೋಗ್ಯದಿಂದ ಬಳಲುತ್ತಿದ್ದ
ಅವರು ಮಂಗಳವಾರ ಬೆಳಗಿನ ಜಾವ ಸ್ವಗೃಹದಲ್ಲಿ ನಿಧನರಾಗಿರುವುದಾಗಿ
ತಿಳಿದು ಬಂದಿದೆ.


ಕುಂಬ್ಳೆ, ಫರಂಗಿಪೇಟೆ ಹಾಗೂ ಪುತ್ತೂರಿನ ಕಲ್ಲೇಗ ಜುಮಾ ಮಸೀದಿಯಲ್ಲಿ ಸಹಾಯಕ ಮುದರ್ರಿಸ್ ಆಗಿ ಸೇವೆ ಸಲ್ಲಿಸಿದ್ದರು.