ಕಡಬ ಟೈಮ್ಸ್, ಕಾಣಿಯೂರು: ಬೆಳಂದೂರು
ಗ್ರಾಮ ವ್ಯಾಪ್ತಿಯ ಕುದ್ಮಾರಿನಲ್ಲಿ ರಸ್ತೆ ವಿಚಾರ ಬಗೆಹರಿಸಲು ಹೋದವರಿಗೆ ಸ್ಥಳೀಯರೊಬ್ಬರು ನಿಂದಿಸಿದ
ಕಾರಣ ಈ ವಿಚಾರ ಪೊಲೀಸ್ ಠಾಣೆ ಮೆಟ್ಟಿಲೇರಿದ ಪ್ರಸಂಗ ಸೆ.22ರಂದು ನಡೆದಿದೆ.




ಕುದ್ಮಾರು ಕಾಲನಿಯಲ್ಲಿ ರಸ್ತೆ ಇತ್ತಂಡಗಳ ನಡುವೆ ರಸ್ತೆಯಲ್ಲಿನ ಬೇಲಿ ವಿಚಾರವಾಗಿ ತಕರಾರು ಎದ್ದಿತ್ತು.ಈ ಹಿನ್ನೆಲೆಯಲ್ಲಿ
ಭೀಮ್ ಆರ್ಮಿ ಸಂಘಟನೆಯ ಪದಾಧಿಕಾರಿಗಳು ಸ್ಥಳಕ್ಕೆ ಹೋಗಿ ಎರಡೂ ಕಡೆಯವರನ್ನೂ ಕರೆಸಿ ಎಲ್ಲರಿಗೂ ರಸ್ತೆ
ಅಗತ್ಯ ಇರುವ ಬಗ್ಗೆ ತಿಳುವಳಿಕೆ ನೀಡಿ ಸಮಸ್ಯೆಯನ್ನು
ಬಗೆಹರಿಸಿದ್ದರು. ಇದರಿಂದ ಎರಡೂಕಡೆಯವರ ಬಹು ಕಾಲದ ಸಮಸ್ಯೆಗೆ ಮುಕ್ತಿ ಸಿಕ್ಕಿತ್ತು.


ಈ ಸಂದರ್ಭದಲ್ಲಿ ಸ್ಥಳೀಯ
ವ್ಯಕ್ತಿಯೊಬ್ಬರು ಮದ್ಯೆ ಪ್ರವೇಶಿಸಿ ಸಂಘರ್ಷ ಉಂಟು ಮಾಡುವ ರೀತಿಯಲ್ಲಿ ಮಾತು ಅರಂಭಿಸಿದ್ದರು. ಇದರಿಂದಾಗಿ
ಸ್ಥಳದಲ್ಲಿ ಗುಂಪು ಸೇರಿತ್ತು. ಭೀಮ್ ಆರ್ಮಿಯ ಅಧ್ಯಕ್ಷ ರಾಘವ ಕಳಾರ ಅವರ ದುರಿನ ಮೇರೆಗೆ ಆತನನ್ನು
ಪೊಲೀಸರು ವಶಕ್ಕೆ ಪಡೆದು ಬಳಿಕ ಠಾಣೆಯಲ್ಲಿ ಎಚ್ಚರಿಕೆ ನೀಡಿ ಕಳುಹಿಸಿರುವುದಾಗಿ ತಿಳಿದು ಬಂದಿದೆ.

