39.9 C
Kadaba
Tuesday, March 18, 2025

ಹೊಸ ಸುದ್ದಿಗಳು

ಕಡಬ: ಲ್ಯಾಪ್‌ಟಾಪ್,ಮೊಬೈಲ್, ಸ್ಕ್ಯಾನರ್, ಇಂಟರ್‌ನೆಟ್ ಸೌಲಭ್ಯ ಕೊಡಿ: ಪ್ರತಿಭಟನೆಯಲ್ಲಿ ಗ್ರಾಮ ಆಡಳಿತಾಧಿಕಾರಿಗಳ ಆಗ್ರಹ

Must read

 ಕಡಬ:
ವಿವಿಧ
ಬೇಡಿಕೆಗಳನ್ನು
ಈಡೇರಿಸುವಂತೆ ಆಗ್ರಹಿಸಿ ಗ್ರಾಮ ಆಡಳಿತಾಧಿಕಾರಿಗಳಿಂದ ಅನಿರ್ದಿಷ್ಟಾವಧಿ ಪ್ರತಿಭಟನೆಯು ಕಡಬ ತಾಲೂಕು ಕಚೇರಿಯ ಮುಂಭಾಗದಲ್ಲಿ ಗುರುವಾರನಡೆಯಿತು.

kadabatimes.in


kadabatimes.in

ಕಚೇರಿಗಳಲ್ಲಿ
ಕಾರ್ಯನಿರ್ವಹಿಸಲು ಹಲವಾರು ಮೂಲಭೂತ ಸಮಸ್ಯೆಗಳಿದ್ದು, ಮುಖ್ಯವಾಗಿ ಮೊಬೈಲ್ ಆಪ್ ಮತ್ತು ವೆಬ್ ಅಪ್ಲಿಕೇಶನ್ಗಳ ಮೂಲಕ ಆಗುತ್ತಿರುವ
ಸಮಸ್ಯೆ, ಇಲಾಖೆಯಿಂದ ಅಭಿವೃದ್ದಿಪಡಿಸಲಾಗಿರುವ ಸುಮಾರು 17ಕ್ಕೂ ಹೆಚ್ಚು ಮೊಬೈಲ್ ವೆಬ್ ತಂತ್ರಾಂಶಗಳ ಮೂಲಕ ಕರ್ತವ್ಯ ನಿರ್ವಹಿಸಲು ಒತ್ತಡ ಹೇರುತ್ತಿದ್ದಾರೆ.

 

kadabatimes.in


ತಂತ್ರಾಂಶಗಳ ನಿರ್ವಹಣೆಗೆ ಅವಶ್ಯವಾಗಿರುವ ಮೊಬೈಲ್ ಸಾಧನ, ಹಾಗು ಲ್ಯಾಪ್ಟಾಪ್ ಹಾಗು ಅದಕ್ಕೆ ಅವಶ್ಯಕವಾಗಿರುವ ಇಂಟರ್ನೆಟ್ ಹಾಗು ಸ್ಕ್ಯಾನರ್ ಗಳನ್ನು ಒದಗಿಸದೇ ಕರ್ತವ್ಯ ನಿರ್ವಹಿಸಲು ಒತ್ತಡ ಉಂಟಾಗುತ್ತಿದೆ. ಅದ್ದರಿಂದ ನಮಗೆ ವೃತ್ತಕ್ಕೆ ಒಂದರಂತೆ ಮೊಬೈಲ್, ಲ್ಯಾಪ್ಟಾಪ್, ಗೂಗಲ್ ಕ್ರೋಮ್ ಬುಕ್ ಪ್ರಿಂಟರ್, ಇಂಟರ್ನೆಟ್ ಸೌಲಭ್ಯ ಸೇರಿದಂತೆ ಇನ್ನೂ ಹಲವಾರು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಅನಿರ್ದಿಷ್ಟಾವಧಿ ಪ್ರತಿಭಟನೆ ಹಮ್ಮಿಕೊಳ್ಳಲಾಯಿತು.


kadabatimes.in

ಪ್ರತಿಭಟನಾ
ಸ್ಥಳಕ್ಕೆ ಆಗಮಿಸಿದ ಕಡಬ ತಾಲೂಕು ತಹಶೀಲ್ದಾರ್ ಪ್ರಭಾಕರ ಖಜೂರೆ ಅವರಿಗೆ ಬೇಡಿಕೆಗಳ ಮನವಿಯನ್ನು ಮುಷ್ಕರ ನಿರತರು ನೀಡಿದರು. ಗ್ರಾಮ ಆಡಳಿತ ಸಂಘದ ಅಧ್ಯಕ್ಷ ಶೇಷಾದ್ರಿ, ಉಪಾಧ್ಯಕ್ಷೆ ಶ್ರುತಿ ಮೊದಲಾದವರು ಉಪಸ್ಥಿತರಿದ್ದರು.

You cannot copy content of this page