39.9 C
Kadaba
Tuesday, March 18, 2025

ಹೊಸ ಸುದ್ದಿಗಳು

ಕಡಬದಲ್ಲಿ ಹಲವು ಸಮಯ ಕೆಲಸ ನಿರ್ವಹಿಸಿ ಭಡ್ತಿ ಪಡೆದು ಪುತ್ತೂರಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಈ ಅಧಿಕಾರಿ ಹೃದಯಾಘತಾಕ್ಕೆ ಬಲಿ

Must read

ಪುತ್ತೂರು  ತಾಲೂಕು ಕಚೇರಿಯ ಚುನಾವಣಾ ಶಾಖೆಯಲ್ಲಿ ಪ್ರಥಮ ದರ್ಜೆ ಸಹಾಯಕರಾಗಿದ್ದ ಕನಕರಾಜ್ ಸೆ.25ರಂದು ರಾತ್ರಿ ಹೃದಯಾಘಾತದಿಂದ ನಿಧನರಾಗಿದ್ದಾರೆ.

kadabatimes.in


kadabatimes.in

ಬುಧವಾರ ರಾತ್ರಿ  ಆರೋಗ್ಯದಲ್ಲಿ ಏರುಪೇರು ಉಂಟಾಗಿದ್ದು ಕೂಡಲೇ ಆಸ್ಪತ್ರೆಗೆ ಕರೆತರಲಾಗಿದ್ದರೂ ಆಸ್ಪತ್ರೆ ತಲುಪುವಷ್ಟರಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

kadabatimes.in


kadabatimes.in

ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲ ನಿವಾಸಿಯಾಗಿರುವ ಕನಕರಾಜ್ ಹಿಂದೆ
ಕಡಬ ಮತ್ತು
ಬೆಟ್ಟಂಪಾಡಿಯಲ್ಲಿ ಗ್ರಾಮ ಆಡಳಿತಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದರು.‌ ನಂತರ ಪ್ರಥಮ ದರ್ಜೆ ಸಹಾಯಕರಾಗಿ ಭಡ್ತಿ ಪಡೆದು ತಾಲೂಕು ಕಚೇರಿಯ ಚುನಾವಣಾ ಶಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಮೃತರು
ಪತ್ನಿ
ಮತ್ತು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

You cannot copy content of this page