ಕಡಬ
ಟೈಮ್, ಅಂತರ್ಜಲ ಮಟ್ಟ ಹೆಚ್ಚಿಸುವ ಬಗೆಗೆ ಜನಜಾಗೃತಿ ಮೂಡಿಸುವ ಮೂಲಕ ಕೃಷಿಕರೊಬ್ಬರು ನೋಬೆಲ್ ವರ್ಲ್ಡ್
ರೆಕಾರ್ಡ್ಸ್ನಲ್ಲಿ ವಿಶ್ವದಾಖಲೆಯ ಮೂಲಕ ಗುರುತಿಸಿಕೊಂಡಿದ್ದಾರೆ.




ನೆಲ್ಯಾಡಿ
ಸಮೀಪದ ಕೊಕ್ಕಡದ ಕೃಷಿಕ ಡೇವಿಡ್ ಜೈಮಿ
ಈ ಗ್ರಾಮೀಣ ಕೃಷಿ ಸಾಧಕರಾಗಿದ್ದಾರೆ.


ಜಲ
ಸಂರಕ್ಷಣಾ ವಿಧಾನದ ಕುರಿತು ಅಭಿಯಾನ ರೀತಿಯಲ್ಲಿ ಜಾಗೃತಿ ಮೂಡಿಸಿದ್ದರು.ಇದರಿಂದ
ಅನೇಕ ಜನರು ಮಳೆ ನೀರು
ಕೊಯ್ಲು ಫಿಲ್ಟರ್ ಬಳಸಿಕೊಂಡು ಬಾವಿ ಬೋರ್ವೆಲ್ಗೆ ಮರುಪೂರಣ ಮಾಡಿ
ಅಂತರ್ಜಲ ವೃದ್ಧಿಯಲ್ಲಿ ತೊಡಗಿದ್ದಾರೆ.


ಈ
ಹಿಂದೆ
ಆರು ವಿಧಗಳಲ್ಲಿ ಜಲ ಸಂರಕ್ಷಣೆ ಮಾಡುವ
ವಿಧಾನವನ್ನು ಪರಿಚಯಿಸಿ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ನಲ್ಲಿ ವಿಶ್ವದಾಖಲೆ ಪಡೆದುಕೊಂಡಿದ್ದರು. ಇದೀಗ ನೂತನ ಸಂಶೋಧನೆಯೊಂದಿಗೆ ಎರಡು ಹೆಚ್ಚಿನ ವಿಧಾನಗಳನ್ನು ಅನ್ವೇಷಿಸಿ ಇದೀಗ ಅಂತರ್ಜಲ ಮಟ್ಟವನ್ನು ಹೆಚ್ಚು ಮಾಡುವ ಎಂಟು ವಿಧಾನಗಳನ್ನು ಅಳವಡಿಸಿದ್ದಾರೆ.