28.9 C
Kadaba
Tuesday, March 18, 2025

ಹೊಸ ಸುದ್ದಿಗಳು

ಸುಬ್ರಹ್ಮಣ್ಯ ಮೂಲಕ ಸುಳ್ಯಕ್ಕೆ ಬರುತ್ತಿದ್ದ ಬಸ್ಸಿನಲ್ಲಿ ವಿದ್ಯಾರ್ಥಿನಿ ಜೊತೆ ಅನುಚಿತ ವರ್ತನೆ: ಯುವಕನಿಗೆ ಹಿಗ್ಗಾಮುಗ್ಗಾ ಥಳಿಸಿದ ಯುವಕರ ಗ್ಯಾಂಗ್

Must read

 ಕಡಬ ಟೈಮ್ಸ್, ಸುಳ್ಯ: ಬಸ್ಸಿನಲ್ಲಿ ಸಹ ಪ್ರಯಾಣಿಕಳಾಗಿದ್ದ ವಿದ್ಯಾರ್ಥಿನಿ ಜೊತೆ ಅನುಚಿತವಾಗಿ ವರ್ತಿಸಿದ ಯುವಕನಿಗೆ
ಹಿಗ್ಗಾಮುಗ್ಗಾ
ಥಳಿಸಿದ ಘಟನೆ  ಸುಳ್ಯ ಬಸ್ ನಿಲ್ದಾಣದಲ್ಲಿ
ಸೋಮವಾರ ಮುಂಜಾನೆ
 ನಡೆದಿದೆ.

kadabatimes.in


kadabatimes.in

ಬೆಂಗಳೂರಿನಿಂದ ಸುಬ್ರಹ್ಮಣ್ಯ ಮೂಲಕ ಸುಳ್ಯಕ್ಕೆ
 ಬರುತ್ತಿದ್ದ ಸರಕಾರಿ ಬಸ್ಸಿಗೆ ಬಿಸಿಲೆ ಘಾಟ್ ಬಳಿ ಸುಳ್ಯದ ಕಾಲೇಜೊಂದರ ವಿದ್ಯಾರ್ಥಿನಿ ಏರಿದ್ದಳು. ಯುವಕ
ಕುಳಿತಿದ್ದ
ಸೀಟಿನ ಪಕ್ಕದಲ್ಲಿ
ಕುಳಿತಿದ್ದು ಈ ವೇಳೆ
 ಆಕೆಯ ಜೊತೆ ಅನುಚಿತವಾಗಿ ವರ್ತಿಸಿರುವುದಾಗಿ
ಆರೋಪಿಸಿರುವುದಾಗಿದೆ.ಈ
ವಿಚಾರವನ್ನು ಬಸ್ ನಿರ್ವಾಹಕನ ಗಮನಕ್ಕೆ ತಂದ ಯುವತಿ ಬಳಿಕ ತನ್ನ ಸಹಪಾಠಿಗಳಿಗೂ ಕರೆ ಮಾಡಿ ಮಾಹಿತಿ ನೀಡಿದ್ದಾಳೆ.


ನಡುವೆ ಬಸ್ ಸುಬ್ರಹ್ಮಣ್ಯಕ್ಕೆ ತಲುಪಿದಾಗ ಆರೋಪಿ ಯುವಕ ಬಸ್ಸಿನಿಂದ ಇಳಿದಿದ್ದು  ವಿದ್ಯಾರ್ಥಿನಿ ಅದೇ ಬಸ್ಸಿನಲ್ಲಿ ಸುಳ್ಯಕ್ಕೆ ಬಂದಿದ್ದಾಳೆ.  ಅಲ್ಲಿ ವಿದ್ಯಾರ್ಥಿನಿಯ ಸಹಪಾಠಿಗಳು ಜಮಾಯಿಸಿದ್ದರು. ಬಳಿಕ ತಂಡವೊಂದು ಆರೋಪಿ ಯುವಕನನ್ನು ಹುಡುಕಿ ಕಾರಿನಲ್ಲಿ ಹೊರಟಿದೆ. ಆರೋಪಿ ಕೇರಳದ ಮೂಲದವನಾಗಿರುವ ಬಗ್ಗೆ ಶಂಕೆ ಇದ್ದುದರಿಂದ ತಂಡವು ಪೈಚಾರ್ ನಲ್ಲಿ ಕಾದು ನಿಂತಿತ್ತು.

kadabatimes.in


ಸುಬ್ರಹ್ಮಣ್ಯದಿಂದ ಬಸ್ಸಿನಲ್ಲಿ ಬಂದು ಪೈಚಾರಿನಲ್ಲಿ ಇಳಿದ
ಯುವಕನನ್ನು
 ಹಿಡಿದು ಥಳಿಸಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಯುವಕನನ್ನು ಗುಂಪಿನಿಂದ ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ


kadabatimes.in

ಹಲ್ಲೆಗೊಳಗಾದ  ನಿಯಾಝ್ ಎಂಬ ಯುವಕ  ಆಸ್ಪತ್ರೆಯಿಂದು ಬಿಡುಗಡೆಗೊಂಡು ತೆರಳಿರುವುದಾಗಿ ತಿಳಿದುಬಂದಿದೆ. . ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ

You cannot copy content of this page