28.9 C
Kadaba
Tuesday, March 18, 2025

ಹೊಸ ಸುದ್ದಿಗಳು

ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಿಖಿಲ್ ಕುಮಾರಸ್ವಾಮಿ :ರಾಜ್ಯ ಸರ್ಕಾರದ ಹಗರಣದ ಬಗ್ಗೆ ಹೇಳಿದ್ದೇನು?

Must read

 ಕುಕ್ಕೆ ಸುಬ್ರಹ್ಮಣ್ಯ: ನಮ್ಮ ಜೆಡಿಎಸ್ ವತಿಯಿಂದ ರಾಜ್ಯದ ಎಲ್ಲಾ
ಜಿಲ್ಲೆಗಳಲ್ಲಿ ಸದಸ್ಯತ್ವ ನೋಂದಣಿ ಹಾಗೂ ಬೂತ್ ಕಮಿಟಿಯನ್ನು ರಚನೆ ಮಾಡಲಾಗಿದೆ. ಇದರೊಂದಿಗೆ ಮುಂದಿನ
ದಿನಗಳಲ್ಲಿ ಜೆಡಿಎಸ್ ಬಲವರ್ಧನೆಗೊಳ್ಳಲಿದೆ.  ಪಕ್ಷದ
ಕಾರ್ಯಕರ್ತರನ್ನು ಹುರಿ ದುಂಬಿಸುವ ಕೆಲಸ ಮಾಡುತಿದ್ದೇವೆ ಎಂದು ರಾಜ್ಯ ಜೆಡಿಎಸ್ ಯುವ ಘಟಕದ ಅಧ್ಯಕ್ಷ
ಹಾಗೂ ಮುಖಂಡ ನಿಖಿಲ್ ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ.

kadabatimes.in


kadabatimes.in


ಅವರು
ಸೆ.23 ರಂದು( ಸೋಮವಾರ)  ಪತ್ನಿ ಸಮೇತ ಕುಕ್ಕೆ ಶ್ರೀ
ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು ಬಳಿಕ ಮಾಧ್ಯಮದವರ ಜೊತೆ ಮಾತನಾಡಿದರು. 
ರಾಜ್ಯ
ಸರಕಾರ ಕಳೆದ ಒಂದುವರೆ ವರ್ಷದ ಆಡಳಿತದ ಅವಧಿಯಲ್ಲಿ ಸಂಪೂರ್ಣ ವಿಫಲವಾಗಿದ್ದು ಹಗರಣದಲ್ಲಿ ಸಿಲುಕಿದೆ,
 ಈ ಬಗ್ಗೆ ರಾಜ್ಯಾದ್ಯಂತ ಪ್ರವಾಸ ಮಾಡಿ ಜನರಿಗೆ ಅರಿವು
ಹಾಗೂ ಜಾಗೃತಿ ಮೂಡಿಸುವ ಕೆಲಸವನ್ನು ಮಾಡುತ್ತಿದ್ದೇನೆ ಎಂದರು.

kadabatimes.in



ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಜೆಡಿಎಸ್ ಉಪಾಧ್ಯಕ್ಷ ಜಾಕೆ ಮಾಧವ ಗೌಡ ಕಡಬ ತಾಲೂಕು ಜೆಡಿಎಸ್
ಅಧ್ಯಕ್ಷ ಸಯ್ಯದ್  ಮೀರಾ ಸಾಹೇಬ್ ಜೆಡಿಎಸ್ ಸೇರಿದಂತೆ
ಪ್ರಮುಖ ನಾಯಕರು ಜೊತೆಗಿದ್ದರು.


kadabatimes.in


You cannot copy content of this page