28.9 C
Kadaba
Tuesday, March 18, 2025

ಹೊಸ ಸುದ್ದಿಗಳು

ಕಾಣಿಯೂರಿನಲ್ಲಿ ಕಾಣಿಕೆ ಡಬ್ಬಿ ಕಳ್ಳತನ| ಪೇಟೆಯಲ್ಲಿದ್ದ ಸಿಸಿ ಟಿವಿ ನಾಟ್ ವರ್ಕಿಂಗ್!

Must read

ಕಡಬ: ಇಲ್ಲಿನ ಕಾಣಿಯೂರು- ಸುಬ್ರಹ್ಮಣ್ಯ ರಸ್ತೆ ಬದಿಯಲ್ಲಿರುವ  ಅಮ್ಮನವರ ಗುಡಿಯ ಕಾಣಿಕೆ ಡಬ್ಬಿ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ.
 ಗುಡಿಯ ಹೊರಗಾಂಣದಲ್ಲಿರುವ ಕಾಣಿಕೆ ಡಬ್ಬಿ ಸೆ.21 ರ ರಾತ್ರಿ ಕಳ್ಳತನವಾಗಿರುವುದಾಗಿದೆ. ಬೆಳ್ಳಾರೆ ಠಾಣಾಧಿಕಾರಿ ಈರಯ್ಯ ಸ್ಥಳಕ್ಕೆ ಬಂದು ತನಿಖೆ ನಡೆಸುತ್ತಿದ್ದಾರೆ.
 ಈ ಹಿಂದೆ ಕಾಣಿಯೂರಿನಲ್ಲಿ ಅಡಿಕೆ ಅಂಗಡಿಯಿಂದ ಅಡಿಕೆ ಕಳ್ಳತನವಾಗಿತ್ತು , ತೆಂಗಿನಕಾಯಿ ಮಾರಾಟ ಅಂಗಡಿಯಿಂದ ಹಾಡುಹಗಲೇ ಕ್ಯಾಸ್ ಕೌಂಟರ್ ನಿಂದ ಹಣ ಕಳ್ಳತನವಾದರೂ ಕಳ್ಳ ಇಷ್ಟರವರೆಗೆ ಪತ್ತೆಯಾಗಿಲ್ಲ.
ಈ ಹಿಂದೆ ಬೆಳ್ಳಾರೆ ಠಾಣೆಯ ಎಸ್ಐ ನೇತೃತ್ವದಲ್ಲೇ ಕಾಣಿಯೂರಿನಲ್ಲಿ ಸಿಸಿಟಿವಿ ಒಂದು ಹಾಕಲಾಗಿದ್ದಾದರೂ ಅದು ಈಗ ಕೆಲಸ ನಿರ್ವಹಿಸುತ್ತಿಲ್ಲ.
ಪ್ರವೀಣ್ ನೆಟ್ಟಾರ್, ಮಸೂದ್ ಕೊಲೆಯ ನಂತರ ಬೆಳ್ಳಾರೆ ಠಾಣಾ ವ್ಯಾಪ್ತಿ ಸೂಕ್ಷ್ಮ ಪ್ರದೇಶವಾಗಿದ್ದು, ಠಾಣಾ ವ್ಯಾಪ್ತಿಯ ಆಯಕಟ್ಟಿನ ಸ್ಥಳಗಳಲ್ಲಿ ಸಿಸಿಟಿವಿ ಹಾಕಿ ಕಾನೂನು ಸುವ್ಯವಸ್ಥೆ ಕಾಪಾಡಲಾಗುವುದು ಪೊಲೀಸರು ತಿಳಿಸಿದ್ದಾರೆ.
 

You cannot copy content of this page