ಸವಣೂರು:
ಸವಣೂರು ಗ್ರಾ.ಪಂ.ಗೆ ಖಾಯಂ
ಪಿಡಿಓ, ಕಾರ್ಯದರ್ಶಿ ನೇಮಕಕ್ಕೆ ಒತ್ತಾಯಿಸಿ ಸವಣೂರು ಗ್ರಾ.ಪಂ.ಸಾಮಾನ್ಯ ಸಭೆಯನ್ನು
ಬಹಿಷ್ಕರಿಸಿ ಪ್ರತಿಭಟನೆ ನಡೆಸಿದ ಬಗ್ಗೆ ಸೆ.19ರಂದು ನಡೆದಿದೆ.




ಪಿಡಿಓ
ವಾರದಲ್ಲಿ 3 ದಿನ ಇದ್ದು ಖಾಯಂ ಪಿಡಿಓ, ಕಾರ್ಯದರ್ಶಿಯವರನ್ನು ಸೆ.10ರೊಳಗೆ ನೇಮಕ ಮಾಡಬೇಕು. ಇಲ್ಲದಿದ್ದಲ್ಲಿ ಗ್ರಾ.ಪಂ. ಸದಸ್ಯರೇ ಪ್ರತಿಭಟನೆ ಮಾಡುತ್ತೇವೆ ಅಲ್ಲದೇ ಸಾಮಾನ್ಯ ಸಭೆಯನ್ನೂ ಬಹಿಷ್ಕರಿಸುತ್ತೇವೆ ಎಂದು ಆಗಸ್ಟ್ ತಿಂಗಳ ಸಾಮಾನ್ಯ ಸಭೆಯಲ್ಲಿ ನಿರ್ಣಯಿಸಲಾಗಿತ್ತು.


ಆದರೆ
ಸೆ.18ರ ವರೆಗೆ ನೇಮಕಾತಿಯಾಗದ
ಹಿನ್ನೆಲೆಯಲ್ಲಿ ಅಧ್ಯಕ್ಷರು, ಉಪಾಧ್ಯಕ್ಷರು,ಸದಸ್ಯರು ಸಾಮಾನ್ಯ ಸಭೆ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು.


ಗ್ರಾ.ಪಂ.ಅಧ್ಯಕ್ಷೆ ಸುಂದರಿ
ಬಿ.ಎಸ್,ಉಪಾಧ್ಯಕ್ಷೆ ಜಯಶ್ರೀ, ಸದಸ್ಯರಾದ ಗಿರಿಶಂಕರ ಸುಲಾಯ, ಚೆನ್ನು ಮುಂಡೋತಡ್ಕ, ಸತೀಶ್ ಅಂಗಡಿಮೂಲೆ, ಎಂ.ಎ.ರಫೀಕ್,
ರಾಜೀವಿ ಶೆಟ್ಟಿ, ಭರತ್ ರೈ , ತಾರಾನಾಥ ಬೊಳಿಯಾಲ, ಶೀನಪ್ಪ ಶೆಟ್ಟಿ ನೆಕ್ರಾಜೆ, ಚಂದ್ರಾವತಿ ಸುಣ್ಣಾಜೆ, ಹರೀಶ್ ಕೆ.,ಚೇತನಾ ಪಾಲ್ತಾಡಿ, ವಿನೋದಾ ರೈ, ಹರಿಕಲಾ ರೈ ,ಯಶೋಧಾ, ಶಬೀನಾ,ಇಂದಿರಾ ಬೇರಿಕೆ,ತೀರ್ಥರಾಮ ಕೆಡೆಂಜಿ ಪ್ರತಿಭಟನೆಯಲ್ಲಿ ಪಾಲ್ಗೊಂಡರು.