ಕಡಬ:
ದ್ವಿಚಕ್ರ ವಾಹನಗಳ ನಡುವೆ ಡಿಕ್ಕಿ ಸಂಭವಿಸಿ ಸವಾರರು ಗಾಯಗೊಂಡಿರುವ ಘಟನೆ ಸೆ.15ರಂದು ಮಧ್ಯಾಹ್ನ ಉಪ್ಪಿನಂಗಡಿ–ಕಡಬ ರಾಜ್ಯ ಹೆದ್ದಾರಿಯ ಕುಂತೂರಿನಲ್ಲಿ ನಡೆದಿದೆ.






ಕುಂತೂರು
ಕೆಮ್ಮಣ್ಣು ನಿವಾಸಿ ಶಶಿಧರ ಎಂಬವರು ಆಲಂಕಾರಿನಿಂದ ಕುಂತೂರಿಗೆ ಸ್ಕೂಟರ್ ಚಲಾಯಿಸಿಕೊಂಡು ಬರುತ್ತಿದ್ದ ವೇಳೆ ಕುಂತೂರು ಚರ್ಚ್ ಎದುರುಗಡೆ ಉಮೇಶ ಎಂಬವರು ಚಲಾಯಿಸಿಕೊಂಡು ಹೋಗುತ್ತಿದ್ದ ಬೈಕನ್ನು ಯಾವುದೇ ಮುನ್ಸೂಚನೆ ನೀಡದೇ ಒಮ್ಮಲೇ ಬಲಭಾಗಕ್ಕೆ ತಿರುಗಿಸಿದ ಪರಿಣಾಮ ಹಿಂದಿನಿಂದ ಬರುತ್ತಿದ್ದ ಶಶಿಧರ ಅವರು ಸ್ಕೂಟರ್ ಸಹಿತ ರಸ್ತೆಗೆ ಬಿದ್ದಿದ್ದಾರೆ.


ಘಟನೆಯಲ್ಲಿ
ಇಬ್ಬರು ಬೈಕ್ ಸವಾರರೂ ಗಾಯಗೊಂಡಿದ್ದಾರೆ. ಈ ಬಗ್ಗೆ ಶಶಿಧರ
ಅವರ ಸಹೋದರ ಆನಂದ ಅವರು ನೀಡಿದ ದೂರಿನಂತೆ ಕಡಬ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.