24.6 C
Kadaba
Tuesday, March 18, 2025

ಹೊಸ ಸುದ್ದಿಗಳು

ಕಳೆ ತೆಗೆಯುವ ಯಂತ್ರಕ್ಕೆ ಸಿಲುಕಿ ಎದೆಗೆ ಬಡಿದ ರಬ್ಬರ್ ಕಪ್‌ನ ಸರಿಗೆ: ಗಂಭೀರ ಗಾಯಗೊಂಡ ಕಾರ್ಮಿಕ ಮೃತ್ಯು

Must read

 ಬೆಳ್ತಂಗಡಿ: ಯಂತ್ರದ ಮೂಲಕ ರಬ್ಬರ್ ತೋಟದ ಕಾಡು ತೆಗೆಯುತ್ತಿದ್ದಾಗ ರಬ್ಬರ್ ಮರಕ್ಕೆ ಕಪ್ ಸಿಲುಕಿಸುವ ರಿಂಗ್ ಎದೆಗೆ ಬಡಿದು ಗಂಭೀರ ಗಾಯಗೊಂಡ ವ್ಯಕ್ತಿಯೊಬ್ಬರು ಚಿಕಿತ್ಸೆ ಫಲಿಸದೆ ಸಾವನ್ನೊಪ್ಪಿದ್ದಾರೆ.

kadabatimes.in


kadabatimes.in

 ಹಾರಿತ್ತಕಜೆ ನಿವಾಸಿ ಕೊರಗಪ್ಪ ಗೌಡ (56)
ಎಂಬವರು ಮೃತಪಟ್ಟವರು.


kadabatimes.in

ಸೆ.17ರಂದು ಬೆಳಗ್ಗೆ ಬೈದಿಕಜೆ ಎಂಬಲ್ಲಿ ರಬ್ಬರ್ ತೋಟದ ಕಳೆ ತೆರವುಗೊಳಿಸುತ್ತಿದ್ದಾಗ ಘಟನೆ ನಡೆದಿದೆ.  ಕಳೆ ತೆಗೆಯುವ ಯಂತ್ರಕ್ಕೆ ಸಿಕ್ಕಿದ ಕಬ್ಬಿಣದ ಸರಿಗೆಯ ರಿಂಗ್ ವೇಗವಾಗಿ ಎದೆಗೆ ಬಡಿದು ಆಳವಾದ ಗಾಯವಾಗಿತ್ತು.


ತಕ್ಷಣ ಆಸ್ಪತ್ರೆಗೆ ಸಾಗಿಸುವ ಪ್ರಯತ್ನವನ್ನು ಸ್ಥಳೀಯರು ಮಾಡಿದರೂ, ದಾರಿಮಧ್ಯೆ ಕೊನೆಯುಸಿರೆಳೆದಿರುವುದಾಗಿ
ತಿಳಿದು ಬಂದಿದೆ
.ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

kadabatimes.in


You cannot copy content of this page