ಕಡಬ ಟೈಮ್ಸ್: ರೈಲು ಢಿಕ್ಕಿ ಹೊಡೆದ ಪರಿಣಾಮ ಮೂವರು ಮಹಿಳೆಯರು ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ಕಾಸರಗೋಡು ಜಿಲ್ಲೆಯ ಕಾಞಂಗಾಡ್ ರೈಲ್ವೆ ನಿಲ್ದಾಣ ಪರಿಸರದಲ್ಲಿ ಶನಿವಾರ ಸಂಜೆ ನಡೆದಿದೆ.






ಮೃತಪಟ್ಟವರನ್ನುಕೊಟ್ಟಾಯಂ ನಿವಾಸಿಗಳಾದ ಚಿನ್ನಮ್ಮ (73), ಏಂಜೆಲೀನ ಅಬ್ರಹಾಂ (30) ಮತ್ತು ಆಲಿಸ್ ಥೋಮಸ್ (61) ಎಂದು ಗುರುತಿಸಲಾಗಿದೆ.
ಕೊಟ್ಟಾಯಂ ಚಿಂಗವನಂ ಎಂಬಲ್ಲಿಂದ ರಾಜಪುರಂ ಸಮೀಪ ಕಲ್ಲಾರಿನಲ್ಲಿ ನಡೆದ ವಿವಾಹ ಸಮಾರಂಭಕ್ಕೆ ಆಗಮಿಸಿ ಹಿಂತಿರುಗಲು ರೈಲ್ವೇ ನಿಲ್ದಾಣಕ್ಕೆ ಬಂದ ಸಂದರ್ಭ ಈ ಘಟನೆ ನಡೆದಿದೆ.
ಸಂಜೆ 7.30ರ ಸುಮಾರಿಗೆ ಮಲಬಾರ್ ಎಕ್ಸ್ ಪ್ರೆಸ್ ರೈಲಿನಲ್ಲಿ ತೆರಳಲು ರೈಲ್ವೆ ನಿಲ್ದಾಣಕ್ಕೆ ಹೋಗುತ್ತಿದ್ದ ಸಂದರ್ಭ ಹಳಿಯಲ್ಲಿ ಸಂಚರಿಸಿದ ಮತ್ತೊಂದು ಎಕ್ಸ್‌ಪ್ರೆಸ್ ರೈಲು ಢಿಕ್ಕಿ ಹೊಡೆದ ಪರಿಣಾಮ ಮೂವರು ಮಹಿಳೆಯರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.