37.7 C
Kadaba
Monday, March 17, 2025

ಹೊಸ ಸುದ್ದಿಗಳು

ನೆಲ್ಯಾಡಿ ಹೊರ ಠಾಣಾ ವ್ಯಾಪ್ತಿ: ಕಡಬ ಸಮೀಪದ ಕೊಣಾಜೆಯಲ್ಲಿ ಅದ್ದೂರಿ ಕೋಳಿ ಅಂಕ!

Must read

ಕಡಬ ಟೈಮ್ಸ್ ,ಕಡಬ: ಕೋಳಿ ಅಂಕದ ಹೆಸರಲ್ಲಿ ಜೂಜಾಟ ಅವ್ಯಾಹತವಾಗಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಇದಕ್ಕೆ  ನಿಷೇಧ  ಹೇರಿ ರಾಜ್ಯ ಪೊಲೀಸ್ ಮಹಾನಿರ್ದೇಶಕರು ಈಗಾಗಲೇ ಆದೇಶ ಹೊರಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ದ.ಕ ಪೊಲೀಸ್ ಇಲಾಖೆಯೂ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ.
ಆದರೆ ಇದೀಗ  ಉಪ್ಪಿನಂಗಡಿ ಠಾಣೆ ನೆಲ್ಯಾಡಿ ಹೊರ ಠಾಣಾ ವ್ಯಾಪ್ತಿಯ ಕೊಣಾಜೆಯಲ್ಲಿ ಸೆ.15 ( ಭಾನುವಾರ) ಕ ಅದ್ದೂರಿಯಾಗಿ  ಕೋಳಿ ಅಂಕ ನಡೆಯುತ್ತಿದೆ.
 ಕೋಳಿ ಅಂಕ ನಡೆಯುವ ಸ್ಥಳದಲ್ಲಿ ಸೀಟು ಹಾಕಿ ವ್ಯವಸ್ಥಿತ ವಾಗಿ ಆಯೋಜನೆ ಮಾಡಿರುವುದಾಗಿ ವರದಿಯಾಗಿದೆ.
ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಗಮನಕ್ಕೂ ತರಲಾಗಿದ್ದು ಈ ಬಗ್ಗೆ ಪರಿಶೀಲಿಸಲಾಗುವುದು ಎಂದಿದ್ದಾರೆ.
ಕೋಳಿ ಅಂಕ ನಡೆಯುವ ಬಗ್ಗೆ ಮೂರು ದಿನಗಳ ಹಿಂದೆಯೇ ಸುದ್ದಿ ಹರಡಿತ್ತು.ಪ್ರಭಾವಿಗಳ ಸಹಕಾರದೊಂದಿಗೆ ಈ ಕೋಳಿ ಅಂಕ ನಡೆಯುತ್ತಿದೆ ಎನ್ನಲಾಗಿದೆ.
ಕೋಳಿ ಅಂಕವು ಪ್ರಾಣಿ ಹಿಂಸೆ ತಡೆ ಕಾಯಿದೆ 1960 ಕಲಂ 11ರ ಪ್ರಕಾರ, ಅಪರಾಧ. ಈ ಕಾಯಿದೆಯನ್ನು ಎಲ್ಲ ಠಾಣೆಗಳ ವ್ಯಾಪ್ತಿಗಳಲ್ಲಿ ಕಡ್ಡಾಯವಾಗಿ ಅನುಷ್ಠಾನಕ್ಕೆ ತರಬೇಕು ಎಂದು ಆದೇಶದಲ್ಲಿ ತಿಳಿಸಲಾಗಿತ್ತು.ಆದರೆ ಇವೆಲ್ಲವನ್ನೂ ಮೀರಿ ಕೋಳಿ ಅಂಕ ಯಾರ ಸಹಕಾರದಲ್ಲಿ ನಡೆದಿದೆ ಎಂಬ ಸಂಶಯ  ಸಾರ್ವಜನಿಕರಲ್ಲಿ ಮೂಡಿದೆ.

You cannot copy content of this page