ಕಡಬ: ನಿವೃತ್ತ
ಸೈನಿಕ ಅಂಗಣ ಸುಂದರ ಗೌಡ(60ವ.) ಅವರು ಸೆ.13ರಂದು ಮಂಗಳೂರಿನ ಆಸ್ಪತ್ರೆಯೊಂದರಲ್ಲಿ ನಿಧನರಾಗಿದ್ದಾರೆ.




ಸೆ.12ರಂದು ಹೃದಯಾಘಾತ ಹಿನ್ನೆಲೆ ಮಂಗಳೂರಿನ
ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು.
ಆದರೆ ಚಿಕಿತ್ಸೆ
ಫಲಕಾರಿಯಾಗದೆ ನಿಧನರಾಗಿರುವುದಾಗಿ ತಿಳಿದು ಬಂದಿದೆ.


ಮೃತರು
ಪಿಜಕ್ಕಳ ಶ್ರೀ
ಮಹಾವಿಷ್ಣು ದೇವಸ್ಥಾನ ವ್ಯವಸ್ಥಾಪನಾ ಸಮಿತಿಯ ಸಕ್ರೀಯ ಸದಸ್ಯರಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿದ್ದರು. ಮೂಲತ: ಮುರುಳ್ಯದವರಾಗಿದ್ದು ಕುಟುಂಬ ಸಮೇತರಾಗಿ
ಕಡಬದಲ್ಲಿ ಹಲವು ವರ್ಷಗಳಿಂದ ವಾಸವಾಗಿದ್ದರು.


ಶನಿವಾರ
ಬೆಳಿಗ್ಗೆ 9 ಗಂಟೆಗೆ ನಿವೃತ್ತ ಸೈನಿಕರ ಸಂಘದಿಂದ ಗೌರವಾರ್ವಪಣೆ ನಡೆಯಲಿದೆ. ಮೃತರು ಪತ್ನಿ, ಓರ್ವ ಪುತ್ರ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.