ಕಡಬ ಟೈಮ್ಸ್, ರಾಜ್ಯದಲ್ಲಿ
ಕಾಂಗ್ರೇಸ್ ಸರಕಾರ ಅಸ್ಥಿತ್ವಕ್ಕೆ ಬಂದ ಬಳಿಕ ಹಿಂದೂ ವಿರೋಧ ಶಕ್ತಿಗಳ ಅಟ್ಟಹಾಸ ಜೋರಾಗುತ್ತಿದೆ. ಮಂಡ್ಯದ ನಾಗಮಂಗಲದಲ್ಲಿ ಗಣೇಶೊತ್ಸವ ಮೆರವಣಿಗೆಗೆ ಅಡ್ಡಿ ಪಡಿಸಿದಲ್ಲದೆ ಕಲ್ಲೂ
ತೂರಾಟ ನಡೆಸಿ ಹಿಂದೂ ಬಂಧುಗಳ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿರುವ ಮುಸ್ಲಿಮ್ ಕಿಡಿಗೇಡಿಗಳ ಕೃತ್ಯ ಖಂಡನೀಯ ಎಂದು ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಕೃಷ್ಣ ಶೆಟ್ಟಿ ಕಡಬ ಅಕ್ರೋಶ ವ್ಯಕ್ತಪಡಿಸಿದ್ದಾರೆ.




ಅವರು
ಸೆ.12 ರಂದು( ಗುರುವಾರ)
ಕಡಬ
ಪೇಟೆಯಲ್ಲಿ ಕಡಬ ತಾಲೂಕು ಗಣೇಶೋತ್ಸವ ಸಮಿತಿಗಳ ನೇತೃತ್ವದಲ್ಲಿ ಮಂಡ್ಯದ ನಾಗಮಂಗಲದಲ್ಲಿ ಗಣೇಶೋತ್ಸವ ಮೆರವಣೆಗೆಯ ಮೇಲೆ ದುಷ್ಕರ್ಮಿಗಳು ಹಿಂದೂಗಳ ಮೇಲೆ ಕಲ್ಲು ತೂರಟ ಮಾಡಿರುವುದನ್ನು ಖಂಡಿಸಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದರು. ಪ್ರವೀಣ್ ನೆಟ್ಟಾರು ಕೊಲೆ ಆರೋಪಿಗಳನ್ನು ಬಿಡುಗಡೆ ಮಾಡಲು ಕಾಂಗ್ರೆಸ್ ಸರಕಾರ ಪಿತೂರಿ
ನಡೆಸುತ್ತಿದೆ.


ಈ ಹಿಂದೆ ಕಾಂಗ್ರೇಸ್
ಸರಕಾರ ಆಡಳಿತದಲ್ಲಿದ್ದಾಗ ಜಿಲ್ಲೆಯಲ್ಲಿ ಹಾಗೂ ರಾಜ್ಯದಲ್ಲಿ ಹೇಗೆ
ಕೋಮು ದುಳ್ಳುರಿಯನ್ನು ಹಬ್ಬಿಸಿದೆ ಎನ್ನುವುದು ನಾಡಿನ ಜನತೆಗೆ ಗೊತ್ತಿದೆ. ಈಗ ಮತ್ತೆ ಕಾಂಗ್ರೇಸ್
ಕುಮ್ಮಕ್ಕಿನಿಂದ ಕೋಮ ಸಂಘರ್ಷ ನಡೆಸಲು ಕಿಡಿಗೇಡಿಗಳು
ಪ್ರಯತ್ನಿಸುತ್ತಿದ್ದಾರೆ.


ಮಂಡ್ಯದಲ್ಲಿ ಹಿಂದೂಗಳ ಮೇಲೆ ನಡೆಸಿದ ಪೂರ್ವಯೋಜಿತ ಕೃತ್ಯದ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು, ಕೃತ್ಯದ ಹಿಂದಿರುವ ದುಷ್ಟ ಶಕ್ತಿಗಳನ್ನು ಹತ್ತಿಕ್ಕಬೇಕು ಎಂದು ಅಗ್ರಹಿಸಿದರು.ಪ್ರತಿಭಟನೆಯಲ್ಲಿ ಹಲವು ಬಿಜೆಪಿ ಮುಖಂಡರು ಪಾಲ್ಗೊಂಡಿದ್ದರು.