23.4 C
Kadaba
Tuesday, March 18, 2025

ಹೊಸ ಸುದ್ದಿಗಳು

ನವ ದಂಪತಿ ಪ್ರಯಾಣಿಸುತ್ತಿದ್ದ ಕಾರು ಡಿಕ್ಕಿ

Must read

 ಕಡಬ ಟೈಮ್ : ಬಿ.ಸಿ.ರೋಡ್ ಸಮೀಪದ
ತಲಪಾಡಿ ರಾಷ್ಟ್ರೀಯ ಹೆದ್ದಾರಿ ಯಲ್ಲಿ ಶನಿವಾರ ಸಂಭವಿಸಿದ ಕಾರು ಅಪಘಾತದಲ್ಲಿ ನವವಿವಾಹಿತೆ ಸಾವಿಗೀಡಾದ ಬಗ್ಗೆ ವರದಿಯಾಗಿದೆ.

kadabatimes.in


kadabatimes.in

ಪೆರ್ನೆ
ಸಮೀಪದ ಒಡ್ಯದಗಯ ನಿವಾಸಿ ಅನೀಶ್ ಕೃಷ್ಣ ಅವರ ಪತ್ನಿ ಮಾನಸ (23) ಸಾವಿಗೀಡಾದವರು. ಗಂಭೀರವಾಗಿ ಗಾಯಗೊಂಡ ಅನಿಶ್ ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.


kadabatimes.in

ಬಿ.ಸಿ.ರೋಡ್ ಕಡೆಯಿಂದ
ಮಂಗಳೂರು ಕಡೆಗೆ ದಂಪತಿ ಪ್ರಯಾಣಿಸುತ್ತಿದ್ದ ಆಲ್ಟೊ ಕಾರು ನಿಯಂತ್ರಣ ತಪ್ಪಿ ರಸ್ತೆ ವಿಭಜಕದ ಮೇಲೇರಿ ಇನ್ನೊಂದು ಬದಿಗೆ ಬಿದ್ದಿದೆ. ಸಂದರ್ಭ ಮಂಗಳೂರಿನಿಂದ
ಬಿ.ಸಿ.ರೋಡ್ ಕಡೆಗೆ
ಸಾಗುತ್ತಿದ್ದ ಸಾರಿಗೆ ನಿಗಮದ ಬಸ್ಸಿಗೆ ಕಾರು ಬಡಿದಿದೆ.ಡಿಕ್ಕಿಯ ರಭಸಕ್ಕೆ ಕಾರು ಸಂಪೂರ್ಣ ಜಖಂಗೊಂಡಿದ್ದು, ವಧು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.

 

kadabatimes.in

ಸೆ.5ರಂದು
ದೇಂತಡ್ಕ ದೇವಸ್ಥಾನದಲ್ಲಿ ಇವರ ಮದುವೆ ಆಗಿತ್ತು. ಮದುವೆಯಾದ ದೇಂತಡ್ಕ ದೇವಸ್ಥಾನಕ್ಕೆ ದಂಪತಿ ಶನಿವಾರ ಭೇಟಿ ನೀಡಿ ಮಾವನ ಮನೆಗೆ ವಾಪಸಾಗುತ್ತಿದ್ದಾಗ ಅವಘಡ ಸಂಭವಿಸಿದೆ.ದಂಪತಿ ಮಂಗಳೂರಿನ ಖಾಸಗಿ ಕಂಪೆನಿಯೊಂದರ ಉದ್ಯೋಗಿಗಳು. ಮೆಲ್ಕಾರ್ಸಂಚಾರಿ ಠಾಣೆ ಪೋಲೀಸರು ಭೇಟಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

You cannot copy content of this page