ಕಡಬ: ಯಕ್ಷಗಾನ ಕಲಾವಿದ ಕಡಬ ಶ್ರೀನಿವಾಸ ರೈ ಸಹಿತ 55 ಮಂದಿ ಸಾಧಕರಿಗೆ ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಜೊತೆಗೆ 20 ಸಂಸ್ಥೆಗಳಿಗೆ ಪ್ರಶಸ್ತಿ ಘೋಷಿಸಲಾಗಿದೆ.
ಕಡಬ ಶ್ರೀನಿವಾಸ ರೈ ಅವರು ಮರ್ದಾಳ ಸಮೀಪದ ಕೊಡಂದೂರು ರಾಮಣ್ಣ ರೈ ಮತ್ತು ಕುಸುಮಾವತಿ ದಂಪತಿ ಪುತ್ರ.ಕರ್ನಾಟಕ ಮೇಳದಲ್ಲಿ 5 ವರ್ಷ , ಪುತ್ತೂರು ಮೇಳದಲ್ಲಿ 2 ವರ್ಷ, ಕದ್ರಿಮೇಳದಲ್ಲಿ 2 ವರ್ಷ,ಮಂಗಳದೇವಿ ಮೇಳದಲ್ಲಿ 7 ವರ್ಷ ,ಇದೀಗ ಬಪ್ಪನಾಡು ಮೇಳದಲ್ಲಿ ಇವರ ಸೇವೆ ಮುಂದುವರೆಸುತ್ತಿದ್ದಾರೆ.
ಕಾಡ ಮಲ್ಲಿಗೆ,ಎಲ್ಲೂರ್ದ ಮಲ್ಲಿ ,ಕಚ್ಚೂರ ಮಲ್ದಿ ಇವರಿಗೆ ಹೆಸರು ತಂದುಕೊಟ್ಟ ಯಕ್ಷಗಾನಗಳು.
ನ.1ರಂದು ಬೆಳಗ್ಗೆ 9ಕ್ಕೆ ನಗರದ ನೆಹರೂ ಮೈದಾನದಲ್ಲಿ ನಡೆಯುವ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿಯನ್ನು ಸ್ಪೀಕರ್ ಯು.ಟಿ.ಖಾದರ್ ಅವರ ಸಮ್ಮುಖ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡುರಾವ್ ಪ್ರದಾನಿಸಲಿದ್ದಾರೆ.