24.4 C
Kadaba
Tuesday, April 1, 2025

ಹೊಸ ಸುದ್ದಿಗಳು

ಕಡಬದಲ್ಲಿ ಲೋಕಲ್ ಮಡೆಂಜಿ ಮೀನಿಗೆ ಭಾರೀ ಡಿಮಾಂಡ್|ಕೆ.ಜಿ ಗೆ ಎಷ್ಟು ಗೊತ್ತಾ?

ಕಡಬ ಟೈಮ್ಸ್ ವೆಬ್ ತಾಣದಲ್ಲಿ ಸುದ್ದಿಗಳನ್ನು ಪರಿಶೀಲಿಸಿಯೇ ಪ್ರಕಟಿಸಲಾಗುತ್ತಿದೆ. ಒಂದು ವೇಳೆ ಆಪೇಕ್ಷಾರ್ಹ, ಅಥವಾ ತಪ್ಪು ಮಾಹಿತಿಗಳು ಕಂಡು ಬಂದಲ್ಲಿ ಇಲ್ಲವೇ ಸಲಹೆಗಳಿದ್ದರೆ  ಸಂಪಾದಕರ ದೂರವಾಣಿ ಸಂಖ್ಯೆ 93804 74819 ಸಂಖ್ಯೆಯನ್ನು ಸಂಪರ್ಕಿಸಬಹುದು.

Must read

kadabatimes.in

kadabatimes.in
kadabatimes.in
kadabatimes.in

ಕಡಬ ಟೈಮ್ಸ್ ವಿಶೇಷ: ದೀಪಾವಳಿ ಬೆಳಕಿನ ಹಬ್ಬ, ಪಟಾಕಿ ಸಿಡಿಸಿ ಸಂಭ್ರಮಿಸುವುದರ ಜೊತೆಗೆ ಮನೆಯಲ್ಲಿ ವಿವಿಧ ಬಗೆಯ ಆಹಾರ ಖಾದ್ಯಗಳನ್ನು ತಯಾರಿಸಿ ಜೌತಣಕೂಟ ಮಾಡುತ್ತಾರೆ. ಮಾರುಕಟ್ಟೆಯಿಂದ ತರಕಾರಿ, ಮೀನು ,ಮಾಂಸಗಳನ್ನು ಜನ ಖರೀದಿ ಮಾಡುತ್ತಿದ್ದಾರೆ.ಇದರ ಜೊತೆಗೆ ಕಡಬದಲ್ಲಿ  ಔಷಧೀಯ ಗುಣವುಳ್ಳ ಮಡೆಂಜಿ ಮೀನು ಭರ್ಜರಿ ಸೇಲಾಗಿದೆ.
ಕಡಬ ಸಮೀಪದ ನೆಟ್ಟಣ ಬೈಲಿನಲ್ಲಿರುವ ನಿತಿನ್ ಗೌಡ ನೆಟ್ಟಣ  ಮಾಲಕತ್ವದ  ಶ್ರೀ ಹರಿ ಫಿಶ್ ಫಾರ್ಮಿನಿಂದ ಹಿಡಿದ ಮೀನುಗಳು   ಲಭ್ಯವಾಗಿದ್ದು ಜನರು ಮುಗಿಬಿದ್ದು ಖರೀದಿ‌ ಮಾಡಿದ್ದಾರೆ. ಮಾಹಿತಿ ಪ್ರಕಾರ ಒಂದೇ ದಿನದಲ್ಲಿ ಒಂದೇ ದಿನದಲ್ಲಿ ನಲ್ವತ್ತು ಕೆ.ಜಿಯಷ್ಟು  ನಷ್ಟು ಮಡೆಂಜಿ ಮೀನುಗಳು ಮಾರಾಟವಾಗಿದೆ.
ಕಡಬ ಸೇರಿದಂತೆ ಮರ್ದಾಳ, ಬೆಳಿನೆಲೆ, ಕೈಕಂಬದ ಸುತ್ತ ಮುತ್ತ ವಾಹನದ ಮೂಲಕ ಮಾರಾಟ ಮಾಡಲಾಗಿದ್ದು ಇತರ ದಿನಗಳಲ್ಲಿ ಭಾನುವಾರ ಮಾತ್ರ ಈ ಮಡೆಂಜಿ ಮೀನುಗಳನ್ನು ಹಿಡಿದು ಮಾರಾಟ ಮಾಡಲಾಗುತ್ತಿದೆ.
ಮಾಜಿ ಸಚಿವ ಅಂಗಾರರ ಮಂಡಂಜಿ ಮೀನು ಕಥೆ ಸ್ಫೂರ್ತಿ!
ಸುಳ್ಯದ ಮಾಜಿ ಸಚಿವ ಎಸ್. ಅಂಗಾರ ಅವರು  ರಾಜ್ಯ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಖಾತೆ ಸಚಿವರಾಗಿದ್ದ ವೇಳೆ ಪುತ್ತೂರು ತಾಲೂಕಿನ ಕುಂಬ್ರದ ನವೋದಯ ರೈತ ಸಭಾಭವನದಲ್ಲಿ ನಡೆದ ‘ಒಳನಾಡು ಮೀನುಗಾರಿಕೆ – ಅವಕಾಶಗಳು ಮತ್ತು ಸವಲತ್ತುಗಳು’ ವಿಷಯದ ಕಾರ್ಯಾಗಾರದಲ್ಲಿ   ಪೈಲ್ಸ್‌ (ಮೂಲವ್ಯಾಧಿ)ಗೆ ಮಡೆಂಜಿ ಮೀನಿನ ಗಂಜಿ ಉತ್ತಮ ಔಷಧ ಎಂದು ಮಡೆಂಜಿ ಮೀನ ಕತೆ ವಿವರಿಸಿದ್ದರು.
ಪೈಲ್ಸ್‌ ಸಮಸ್ಯೆಗೆ ತುತ್ತಾದಾಗ ನನ್ನ ಅಜ್ಜಿ ಮಡೆಂಜಿ ಮೀನಿನ ಗಂಜಿ ನೀಡಿದ್ದರು. ಮಡೆಂಜಿ ಮೀನನ್ನು ಹಿಡಿದು ತಂದು ನೆಲದ ಮೇಲೆ ಬೆಳ್ತಿಗೆ ಅಕ್ಕಿಯ ಮೇಲೆ ಬಿಡಬೇಕು. ಸಾಕಷ್ಟು ಹೊತ್ತು ಪ್ರಾಣ ಸಂಕಟದಿಂದ ಅಕ್ಕಿಯ ಮೇಲೆ ಹೊರಳಾಡಿ ಮೀನು ಸಾಯುತ್ತದೆ. ಬಳಿಕ ಮೀನಿನ ಮೇಲೆ ಅಂಟಿಕೊಂಡ ಅಕ್ಕಿಯನ್ನು ತೆಗೆದು ಗಂಜಿ ಮಾಡಿ ಉಪ್ಪು, ಅರಿಶಿನ ಸೇರಿಸಿ ಸೇವಿಸಬೇಕು. ಈ ರೀತಿ ಒಂದಷ್ಟು ಸಮಯ ನನಗೆ ಅಜ್ಜಿ ಮಾಡಿಕೊಟ್ಟಿದ್ದರು. ಆಮೇಲೆ ಮತ್ತೆಂದೂ ಆ ಸಮಸ್ಯೆ ನನಗೆ ಕಾಡಿಲ್ಲ ಎಂದಿದ್ದರು.
 ಇದರಿಂದ ಸ್ಫೂರ್ತಿ ಪಡೆದ ನಿತಿನ್ ನೆಟ್ಟಣ ಅವರು  ಅವರು ಮೀನು ಸಾಕಾಣಿಕೆಗೆ ಮುಂದಾಗಿದ್ದಾರೆ. ಪ್ರಸ್ತುತ ಇವರ ಬಳಿ 1000 ಕ್ಕೂ ಹೆಚ್ಚು  ಮೀನು ಮರಿಗಳಿವೆ, ಮಾರುಕಟ್ಟೆಯಲ್ಲಿ ದೀಪಾವಳಿ ಸಮಯದಲ್ಲಿ ಕೆ.ಜೆ ಗೆ 500 ರೂ ನಂತೆ ಮಾರಾಟ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಎಲೆ ಚುಕ್ಕಿ ರೋಗವೂ ಕಡಿಮೆ: ತನ್ನ ತೋಟಕ್ಕೆ ಮೀನು ಸಾಗಾಣಿಕೆ ಬಳಸಿದ ನೀರನ್ನು  ನಿರಂತರವಾಗಿ ಬಿಡಲಾಗುತ್ತಿದೆ.ಇದರಿಂದ ತೋಟಕ್ಕೆ ಆವರಿಸಿದ ಎಲೆ ಚುಕ್ಕಿ ರೋಗವೂ ವಾಸಿಯಾಗಿದೆ, ಈ ನೀರು ಸಾವಯವ ಗೊಬ್ಬರದಂತೆ ಕೆಲಸ ಮಾಡುತ್ತದೆ ಎಂದು ಹೇಳುತ್ತಾಋ   ಫಿಶ್ ಫಾರ್ಮಿನ ಮಾಲಕರು. ನಾಲ್ಕು ದಿನಗಳಿಗೊಮ್ಮೆ ನೀರು ಬದಲಾಯಿಸುತ್ತಿದ್ದು ಅವೆಲ್ಲವನ್ನೂ  ಅಡಿಕೆ ತೋಟಗಳಿಗೆ ಬಳಸಲಾಗುತ್ತಿದೆ ಎಂದು ಕಡಬ ಟೈಮ್ಸ್ ಜೊತೆ ಅನುಭವ ಹಂಚಿಕೊಂಡಿದ್ದಾರೆ.

ನಿಮ್ಮೂರಿನ ಸುದ್ದಿಗಳು, ಜಾಹೀರಾತುಗಳಿಗಾಗಿ  93804 74819 ಸಂಖ್ಯೆಯನ್ನು ಸಂಪರ್ಕಿಸಬಹುದು.ಇಲ್ಲವೇ kadabatimes@gmail.com ಗೆ ಇಮೇಲ್ ಕಳುಹಿಸಬಹುದು. ನಮ್ಮನ್ನು  Facebook ಅಥವಾ Youtube ನಲ್ಲಿ ಹಿಂಬಾಲಿಸಿ.