

![]() ![]() |
ಸುಳ್ಯ ಠಾಣೆಯಲ್ಲಿ ಪ.ಜಾ/ಪ.ಪಂ ಕುಂದು ಕೊರತೆ ಸಭೆ ನಡೆಯುತ್ತಿರುವುದು |


ಕಡಬ
ಟೈಮ್ಸ್ ಸುಳ್ಯ: ಸುಳ್ಯ ಪೊಲೀಸ್ ಠಾಣೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳ
ಕುಂದು ಕೊರತೆ ಸಭೆಯು ಠಾಣಾ
ಉಪನಿರೀಕ್ಷಕ ಸಂತೋಷ ರವರ ನೇತೃತ್ವದಲ್ಲಿ ನ. 3 ರಂದು ನಡೆಯಿತು.
ಈ ವೇಳೆ ಮಾತನಾಡಿದ ಎಸ್.ಐ, ಕಾಲೋನಿಗಳಲ್ಲಿ ಸಮಸ್ಯೆಗಳಿದ್ದರೆ ಸಂಬಂಧಪಟ್ಟ ಇಲಾಖೆಗಳ ಗಮನಕ್ಕೆ ತನ್ನಿ. ಯಾವುದೇ ಕಾರಣಕ್ಕೂ ಪರಸ್ಪರ ಸುತ್ತಮುತ್ತಲಿನವರು ಸರಿಪಡಿಸಲು
ಹೋಗಿ ಸಮಸ್ಯೆಗಳಿಗೆ ಆಸ್ಪದ ನೀಡಬೇಡಿ ಎಂದು ಕಿವಿಮಾತು ಹೇಳಿದರಲ್ಲದೆ ಯಾವುದೇ ರೀತಿಯ
ಪ್ರತಿಭಟನೆ, ಮೆರವಣಿಗೆ ಮುಂತಾದ ಕಾರ್ಯಕ್ರಮಗಳನ್ನು ಮಾಡುವಾಗ ಪೊಲೀಸ್ ಇಲಾಖೆಗೆ ಮಾಹಿತಿ ನೀಡಬೇಕು, ಕಾನೂನಿನ ನಿಯಮಗಳನ್ನು
ಪಾಲಿಸಬೇಕೆಂದು ಕಾನೂನು
ಅರಿವು ನೀಡಿದರು.
ಸಭೆಯಲ್ಲಿ
ಭಾಗವಹಿಸಿದ್ದ ಪರಿಶಿಷ್ಟ
ಜಾತಿ ಮತ್ತು ಪಂಗಡದ ಮುಖಂಡರುಗಳು
ಸಭೆಯಲ್ಲಿ
ಹಲವು ಸಮಸ್ಯೆಗಳ ಬಗ್ಗೆ ಪ್ರಸ್ತಾಪಿಸಿ ಚರ್ಚಿಸಿದರು.ಸುಳ್ಯ
ನಗರದ ಕೆಲವು ವಾರ್ಡ್ ಗಳಲ್ಲಿ ಮಾದಕ ವಸ್ತುಗಳ ಬಳಕೆ ಹೆಚ್ಚುತ್ತಿರುವ ಬಗ್ಗೆ ಮತ್ತು ಇಲಾಖೆಯಿಂದ ಸೂಕ್ತ ಕ್ರಮ ಕೈಗೊಳ್ಳುವ ಬಗ್ಗೆ ಸುಂದರ ಪಾಟಾಜೆಯವರು ಮನವಿ ಮಾಡಿಕೊಂಡರು.


ಸತೀಶ್
ಬೂಡುಮಕ್ಕಿ ಅವರು ಮಾತನಾಡಿ ಕೆಲವು ಮೈಕ್ರೋಫೈನಾನ್ಸ್ ಸಂಸ್ಥೆಯವರು ಸಾಲ ಮರುಪಾವತಿ ಕೇಳುವ ವಿಷಯಕ್ಕಾಗಿ ರಾತ್ರಿ ವೇಳೆ ಮನೆಗಳಿಗೆ ಬಂದು ಸಮಸ್ಯೆ ಕೊಡುತ್ತಾರೆ. ಈ ಬಗ್ಗೆ ಕ್ರಮ
ಕೈಗೊಳ್ಳಲು ಮತ್ತು ದೊಡ್ಡೇರಿ ತೂಗು ಸೇತುವೆಯ ತಡೆ ಬೇಲಿ ಮುರಿದು ಅಪಾಯಕಾರಿ ಸ್ಥಿತಿ ನಿರ್ಮಾಣವಾಗಿದೆ ಈ ಬಗ್ಗೆ ಕ್ರಮ
ಕೈಗೊಳ್ಳಲು ಕೇಳಿಕೊಂಡರು.
ಅಜ್ಜಾವರ
ಮತ್ತು ಕೆಲವು ಕಡೆ ಸ್ಮಶಾನದ ಸಮಸ್ಯೆ ಬಗ್ಗೆಯೂ ಸಭೆಯಲ್ಲಿ ಪ್ರಸ್ತಾಪವಾಯಿತು.
ಸರಸ್ವತಿ ಬೊಳಿಯಮಜಲುರವರು
ಮಾತನಾಡಿ ಎಲ್ಲಾ ಗ್ರಾಮಗಳಿಗೆ ಇರುವ ಬೀಟ್ ಪೊಲೀಸರ ನೇತೃತ್ವದಲ್ಲಿ ಗ್ರಾಮ ಗ್ರಾಮ ದಲ್ಲಿ ಈ ರೀತಿಯ ಮಾಹಿತಿ
ಸಭೆ ನಡೆದರೆ ಉತ್ತಮ ಎಂದು ಅಭಿಪ್ರಾಯ ಹಂಚಿಕೊಂಡರು.
ಸಭೆಯಲ್ಲಿ
ಚಂದ್ರಶೇಖರ ಪಲ್ಲತಡ್ಕ, ವಿಜಯ ಆಲಡ್ಕ, ಮಲ್ಲೇಶ್ ಕುಡೆಕಲ್ಲು,ಸಂದೀಪ್ ಕೆ, ಹರೀಶ್ ಎಂ. ಎಸ್.,ಮಹೇಶ್ ಬೆಳ್ಳಾರ್ಕರ್ ,ಚೋಮಾ ಎನ್. ಬಿ. ಗಾಂಧಿನಗರ,ಗಣೇಶ್ ಕುಮಾರ್ ಅಜ್ಜಾವರ, ಗಣೇಶ್ ಸಂಪಾಜೆ, ಅಜಿತ್ ಮೇನಾಲ,ದೇವಕ್ಕಿ, ಅಭಿಜಿತ್,ಅಜಿತ್, ಫಕಿರೇಶ್ ಮೊದಲಾದವರು ಭಾಗವಹಿಸಿದ್ದರು.

