ಕಡಬ ಟೈಮ್, KADABAT IMES : ನಂದಿನಿ ಹಾಲಿನ ಬೆಲೆ ಏರಿಕೆ ಹಿನ್ನೆಲೆಯಲ್ಲಿ ಹೊಟೇಲ್ ಉದ್ಯಮ ಕೂಡ ಆಹಾರ ಪದಾರ್ಥಗಳ ಬೆಲೆ ಏರಿಕೆ ಮಾಡುವುದು ಅನಿವಾರ್ಯ ಎಂದು ರಾಜ್ಯ ಹೊಟೇಲ್‌ಗಳ ಸಂಘದ ಗೌರವಾಧ್ಯಕ್ಷ ಚಂದ್ರಶೇಖರ್ ಹೆಬ್ಬಾರ್ ತಿಳಿಸಿದ್ದಾರೆ.


ರಾಜ್ಯ ಸರಕಾರ ಈಗಾಗಲೇ ಹಾಲು, ವಿದ್ಯುತ್ ಸೇರಿದಂತೆ ಬಹುತೇಕ ಎಲ್ಲ ಪದಾರ್ಥಗಳ ಬೆಲೆ ಏರಿಕೆ ಮಾಡಿ ಬಡವರ ಮೇಲೆ ಬರೆ ಎಳೆದಿದೆ. ದೊಡ್ಡ ಸ್ಟಾರ್ ಹೊಟೇಲ್‌ಗಳ ಮೇಲೆ ಬೆಲೆ ಏರಿಕೆ ಪ್ರಭಾವ ಬೀರುವುದಿಲ್ಲ. ಆದರೆ ದರ್ಶಿನಿ ಸೇರಿದಂತೆ ಸಣ್ಣ ಹೊಟೇಲ್‌ಗಳ ಮೇಲೆ ದೊಡ್ಡ ಪರಿಣಾಮ ಬೀರಲಿದೆ.






ಅವುಗಳು ಅಸ್ತಿ ತ್ವ ಉಳಿಸಿಕೊಳ್ಳುವುದೇ ಕಷ್ಟವಾಗಲಿದೆ. ಆದ್ದರಿಂದ ಮುಂದಿನ ತಿಂಗಳು ಎಷ್ಟು ಪ್ರಮಾಣದಲ್ಲಿ ಬೆಲೆ ಏರಿಕೆ ಮಾಡಬೇಕು ಎಂಬ ಬಗ್ಗೆ ಹೊಟೇಲ್ ಉದ್ಯಮ ಸೂಕ್ತ ತೀರ್ಮಾನ ಕೈಗೊಳ್ಳಲಿದೆ ಎಂದು ಹೇಳಿದ್ದಾರೆ.