ಇಬ್ಬರು ಅಪ್ರಾಪ್ತ ಬಾಲಕಿಯರೊಂದಿಗೆ ನಾಲ್ಕು ಮಂದಿ ಯುವಕರ ತಂಡ

kadaba times

ಕಡಬ ಟೈಮ್, ಪ್ರಮುಖ ಸುದ್ದಿ:   ವೇಶ್ಯಾವಾಟಿಕೆ ಅಡ್ಡಗೆ ದಾಳಿ ನಡೆಸಿದ ಮೂಡುಬಿದ್ರೆ ಪೊಲೀಸರು ನಾಲ್ವರನ್ನು ಬಂಧಿಸಿರುವ ಘಟನೆ ನಿ ಡ್ಡೋಡಿಯಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ.

kadaba times
uniq

ನಿಡ್ಡೋಡಿಯ ವ್ಯಕ್ತಿ,  ಕಟೀಲು ಪರಿಸರದ ವ್ಯಕ್ತಿ ಸಹಿತ ನಾಲ್ವರು ಆರೋಪಿಗಳನ್ನು ಯಜ್ಞೇಶ್,ದಿಲೀಪ್ ಹಾಗೂ ಶ್ರೀಕಾಂತ್ ಆರೋಪಿಗಳು ಎಂದು ಗುರುತಿಸಲಾಗಿದೆ.

ಘಟನೆ ವಿವರ:  ಇಬ್ಬರು ಅಪ್ರಾಪ್ತ ಬಾಲಕಿಯರೊಂದಿಗೆ ನಾಲ್ಕು ಮಂದಿ ಯುವಕರ ತಂಡವೊಂದು ನಿಡ್ಡೋಡಿಯ ಮನೆಯೊಂದರಲ್ಲಿದ್ದಾರೆನ್ನುವ  ಮಾಹಿತಿ ತಿಳಿದ  ಇನ್ಸ್ಪೆಕ್ಟರ್ ಸಂದೇಶ್ ಪಿ.ಜಿ.ನೇತೃತ್ವದ  ಪೊಲೀಸ್ ತಂಡವು ಆ ಮನೆಗೆ ದಾಳಿ ನಡೆಸಿದೆ.  ಮಹೇಶ ಎಂಬಾತನ  ಮನೆಯಲ್ಲಿ ಅವನೊಬ್ಬನೇ ವಾಸವಿದ್ದುದರಿಂದ ಆ ಮನೆಯನ್ನು ಈ ಕೃತ್ಯಕ್ಕೆ ಉಪಯೋಗಿಸುತ್ತಿದ್ದನೆನ್ನಲಾಗಿದೆ.

kadaba times
kadaba times

ಆರೋಪಿಗಳ ವಿರುದ್ಧ ಮೂಡುಬಿದಿರೆ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿದೆ. ಸಂತ್ರಸ್ತ ಬಾಲಕಿಯರನ್ನು ಮತ್ತು ಆರೋಪಿಗಳನ್ನು ಠಾಣೆಗೆ ತಂದು ವಿಚಾರಿಸಿದಾಗ ಎಲ್ಲ ವಿಚಾರಗಳನ್ನೂ ಬಾಯಿಬಿಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಇನ್ಸ್‌ಪೆಕ್ಟರ್ ಸಂದೇಶ್ ಪಿ.ಜಿ.ಅವರ ಸಮಯಪ್ರಜ್ಞೆ ಮತ್ತು ಆರೋಪಿಗಳನ್ನು ಬಂಧಿಸಿರುವ ಕ್ರಮಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

Related Articles

Latest Articles