ಕಡಬ ಟೈಮ್ಸ್(KADABA TIMES): ಪಟ್ಟಣ ಸುದ್ದಿ : ಕಡಬ ಠಾಣಾ ವಠಾರದಲ್ಲಿ ಶ್ರೀ ನಾಗದೇವರ ಶಿಲಾ ಪ್ರತಿಷ್ಠೆ, ಹಾಗು ರಕ್ತೇಶ್ವರಿ –ಗುಳಿಗ ದೈವಗಳ ಬಿಂಬ ಪ್ರತಿಷ್ಠೆ ಮತ್ತು ಬ್ರಹ್ಮಕಲಶವು ಕೆಮ್ಮಿಂಜೆ ಲಕ್ಷೀಶ ತಂತ್ರಿಗಳ ನೇತೃತ್ವದಲ್ಲಿ ಅರ್ಚಕ ಪ್ರಸಾದ್ ಕೆದಿಲಾಯ ಉಪಸ್ಥಿತಿಯಲ್ಲಿ ಸೋಮವಾರ ನಡೆಯಿತು.


ಭಾನುವಾರ ಸಾಯಂಕಾಲ ದೇವತಾ ಪ್ರಾಥನೆ,ಆಚಾರ್ಯವರಣ,,ಸ್ಥಳ ಶುದ್ದಿ, ರಕ್ಷೋಘ್ನ ಹೋಮ, ವಾಸ್ತು ಹೋಮ,ವಾಸ್ತು ಪೂಜಾ ಬಲಿ, ದುರ್ಗಾ ಪೂಜೆ,ಇಂದ್ರಾದಿ ದಿಪ್ ಪಾಲಕಬಲಿ,ವಾಸ್ತು ಪುಣ್ಯಾಹ ,ಪ್ರಸಾದ ವಿತರಣೆ, ಸೋಮವಾರ ಬೆಳಿಗ್ಗೆ ಪ್ರತಿಷ್ಠಾ ಹೋಮ,ಪ್ರಾಯಶ್ಚಿತ್ತ ಪವಮಾನ ಹೋಮ, ಬ್ರಹ್ಮಕಲಶ ಪೂಜೆ,ಮಹಾಗಣಪತಿ ಹೋಮ,ಸರ್ವ ಪ್ರಾಯಶ್ಚಿತ್ತ, ಆಸ್ಲೇಷ ಬಲಿ ನಡೆಯಿತು.




ಬಳಿಕ ಶ್ರೀ ನಾಗದೇವರ ಶಿಲಾ ಪ್ರತಿಷ್ಠೆ, ಹಾಗು ರಕ್ತೇಶ್ವರಿ –ಗುಳಿಗ ದೈವಗಳ ಬಿಂಬ ಪ್ರತಿಷ್ಠೆ, ಪಂಚಾಮೃತ ಅಭಿಷೇಕ,ಬ್ರಹ್ಮಕಲಶಾಭಿಷೇಕ,ಬ್ರಹ್ಮಕಲಾಶಭಿಷೇಕ, ತಂಬಿಲ ಸೇವೆ,ಮಹಾಪೂಜೆ, ಪ್ರಸಾದ ವಿತರಣೆ,ಅನ್ನಸಂತರ್ಪಣೆ ನಡೆಯಿತು.


ಶ್ರೀ ನಾಗದೇವರ ಶಿಲಾ ಪ್ರತಿಷ್ಠೆ, ಹಾಗು ರಕ್ತೇಶ್ವರಿ –ಗುಳಿಗ ದೈವಗಳ ಬಿಂಬ ಪ್ರತಿಷ್ಠೆ ಮತ್ತು ಬ್ರಹ್ಮಕಲಶ ಸಮಿತಿ ಗೌರವಾಧ್ಯಕ್ಷ ಹರೀಶ್ ಪೈ, ಅಧ್ಯಕ್ಷ ಸೋಮಪ್ಪ , ಉಪ್ಪಿನಂಗಡಿ ವೃತ್ತ ನಿರೀಕ್ಷಕ ರವಿ ಬಿ.ಎಸ್, ಕಡಬ ಠಾಣಾ ಉಪನಿರೀಕ್ಷಕರಾದ ಅಭಿನಂದನ್ ಎಂ, ಅಕ್ಷಯಡವಗಿ, ಠಾಣಾ ಸಿಬ್ಬಂದಿಗಳು, ಸೇರಿದಂತೆ ರಾಜಕೀಯ,ಧಾರ್ಮಿಕ,ಸಾಮಾಜಿಕ ಮುಂದಾಳುಗಳು,ವಿವಿಧ ಇಲಾಖೆಯ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.