35.8 C
Kadaba
Wednesday, March 26, 2025

ಹೊಸ ಸುದ್ದಿಗಳು

ಕಡಬ: ಸೌಹಾರ್ದ ಸಾಮೂಹಿಕ ಬೃಹತ್ ಇಫ್ತಾರ್ ಕೂಟಕ್ಕೆ ಸಾಕ್ಷಿಯಾದ ಸರ್ವ ಧರ್ಮಿಯರು

ಕಡಬ ಟೈಮ್ಸ್ ವೆಬ್ ತಾಣದಲ್ಲಿ ಸುದ್ದಿಗಳನ್ನು ಪರಿಶೀಲಿಸಿಯೇ ಪ್ರಕಟಿಸಲಾಗುತ್ತಿದೆ. ಒಂದು ವೇಳೆ ಆಪೇಕ್ಷಾರ್ಹ, ಅಥವಾ ತಪ್ಪು ಮಾಹಿತಿಗಳು ಕಂಡು ಬಂದಲ್ಲಿ ಇಲ್ಲವೇ ಸಲಹೆಗಳಿದ್ದರೆ  ಸಂಪಾದಕರ ದೂರವಾಣಿ ಸಂಖ್ಯೆ 93804 74819 ಸಂಖ್ಯೆಯನ್ನು ಸಂಪರ್ಕಿಸಬಹುದು.

Must read

Kadabatimes
Kadabatimeshttps://kadabatimes.in
ಕಡಬ ಟೈಮ್ಸ್ ಒಂದು ಸ್ವತಂತ್ರ ಡಿಜಿಟಲ್ ಮಾಧ್ಯಮವಾಗಿದೆ.ರಾಜಕೀಯ ಹಸ್ತಕ್ಷೇಪ ಇಲ್ಲದ, ಬಂಡವಾಳ ಶಾಹಿಗಳ ನಿಯಂತ್ರಣದಲ್ಲಿರದ ಸ್ಥಳೀಯ ಆನ್ಲೈನ್ ಮಾಧ್ಯಮ ಇದಾಗಿದ್ದು ಕಡಬ ತಾಲೂಕು ಕೇಂದ್ರಿತ ಸುದ್ದಿಗಳನ್ನು ಹೆಚ್ಚು ಪ್ರಕಟಿಸುತ್ತಿದೆ. ಸ್ಥಳೀಯ ತಾಲೂಕು, ಜಿಲ್ಲೆ, ರಾಜ್ಯ, ರಾಷ್ಟ್ರದ ಪ್ರಮುಖ ವಿಚಾರಗಳನ್ನು ಪ್ರಕಟಿಸುತ್ತದೆ. ನಿಮ್ಮೂರಿನ ಸುದ್ದಿಗಳು, ಜಾಹೀರಾತು ಅಥವಾ ಸಲಹೆಗಳಿದ್ದರೆ 93804 74819 ಸಂಖ್ಯೆಯನ್ನು ಸಂಪರ್ಕಿಸಬಹುದು

ಕಡಬ ಟೈಮ್ಸ್(KADABA TIMES): ಕಡಬ: ಇಲ್ಲಿನ  ಯೂತ್  ಫ್ರೆಂಡ್ಸ್ ಕೊರುಂದೂರು ಇದರ ವತಿಯಿಂದ  ಎರಡನೇ ವರ್ಷದ ಸೌಹಾರ್ದ ಸಾಮೂಹಿಕ ಬೃಹತ್ ಇಫ್ತಾರ್ ಕೂಟವು ಮಾ.24 ರಂದು ಸಂಜೆ ವಿಜೃಂಭಣೆಯಿಂದ ನಡೆಯಿತು.

kadabatimes.in

ಬಹು ಉಸ್ತಾದ್ ಮಹಮ್ಮದ್ ಮುಸ್ತಫಾ ಇರ್ಫಾನಿ ಆವರು ಎಲ್ಲರನ್ನೂ ಸ್ವಾಗತಿಸಿ, ರಮಝಾನ್ ಮನುಷ್ಯನ ಮನಸ್ಸು ಸ್ವಚ್ಛಗೊಳಿಸುವ ಆರಾಧನೆ. ಕಳೆದ ವರ್ಷವೂ  ಇಫ್ತಾರ್ ಕೂಟ ನಡೆದಿದೆ, ಈ ವರ್ಷವೂ ಆಯೋಜಿಸಲಾಗಿದೆ.  ಇಂತಹಾ ಸೌಹಾರ್ದ ಕಾರ್ಯಕ್ರಮಗಳು ಹೆಚ್ಚು ಹೆಚ್ಚಾಗಿ ನಡೆಯಬೇಕು. ಈ ಮೂಲಕ ಸೌಹಾರ್ದಕ್ಕೆ ಒತ್ತು ನೀಡಬೇಕು ಎಂದು  ಹೇಳಿದರು.

kadabatimes.in
kadabatimes.in
kadabatimes.in

ಕಾರ್ಯಕ್ರಮದಲ್ಲಿ ಸರ್ವ ಧರ್ಮದ ಪ್ರಮುಖರು, ಗಣ್ಯರು,ಗ್ರಾಮಸ್ಥರು ಭಾಗವಹಿಸಿದ್ದರು . ಹಲವಾರು ವಿಧದ ಪಾನೀಯ,  ಹಣ್ಣು ಹಂಪಲುಗಳು, ವಿವಿಧ್ಯ ಖಾದ್ಯಗಳು ಉಣಬಡಿಸಲಾಯಿತು .ಸಂಘಟನೆಯ ಮುಂದಾಳು  ಸಿದ್ದೀಕ್ ಕೊರುಂದೂರು ಕಾರ್ಯಕ್ರಮ ನಿರ್ವಹಿಸಿದರು.

ನಿಮ್ಮೂರಿನ ಸುದ್ದಿಗಳು, ಜಾಹೀರಾತುಗಳಿಗಾಗಿ  93804 74819 ಸಂಖ್ಯೆಯನ್ನು ಸಂಪರ್ಕಿಸಬಹುದು.ಇಲ್ಲವೇ kadabatimes@gmail.com ಗೆ ಇಮೇಲ್ ಕಳುಹಿಸಬಹುದು. ನಮ್ಮನ್ನು  Facebook ಅಥವಾ Youtube ನಲ್ಲಿ ಹಿಂಬಾಲಿಸಿ.