36.3 C
Kadaba
Friday, March 28, 2025

ಹೊಸ ಸುದ್ದಿಗಳು

ಕುಕ್ಕೆ ಸುಬ್ರಹ್ಮಣ್ಯ :ವ್ಯವಸ್ಥಾಪನಾ ಸಮಿತಿಯಲ್ಲಿ ಮಲೆ ಕುಡಿಯ ಸಮುದಾಯಕ್ಕೆ ಪ್ರಾಧಾನ್ಯತೆ ನೀಡುವಂತೆ ಆಗ್ರಹ

ಸಮುದಾಯ ಕಡೆಗಣಿಸಿ ಸಮಿತಿ ರಚಿಸದಲ್ಲಿ ಮೂಲ ಕೆಲಸಗಳಾದ ರಥ ಕಟ್ಟುವ ಕೆಲಸ ಸೇರಿದಂತೆ ಎಲ್ಲಾ ದೇವರ ಕೆಲಸಗಳನ್ನು ನಿಲ್ಲಿಸಿ ಪ್ರತಿಭಟನೆಯ ಎಚ್ಚರಿಕೆ

ಕಡಬ ಟೈಮ್ಸ್ ವೆಬ್ ತಾಣದಲ್ಲಿ ಸುದ್ದಿಗಳನ್ನು ಪರಿಶೀಲಿಸಿಯೇ ಪ್ರಕಟಿಸಲಾಗುತ್ತಿದೆ. ಒಂದು ವೇಳೆ ಆಪೇಕ್ಷಾರ್ಹ, ಅಥವಾ ತಪ್ಪು ಮಾಹಿತಿಗಳು ಕಂಡು ಬಂದಲ್ಲಿ ಇಲ್ಲವೇ ಸಲಹೆಗಳಿದ್ದರೆ  ಸಂಪಾದಕರ ದೂರವಾಣಿ ಸಂಖ್ಯೆ 93804 74819 ಸಂಖ್ಯೆಯನ್ನು ಸಂಪರ್ಕಿಸಬಹುದು.

Must read

Kadabatimes
Kadabatimeshttps://kadabatimes.in
ಕಡಬ ಟೈಮ್ಸ್ ಒಂದು ಸ್ವತಂತ್ರ ಡಿಜಿಟಲ್ ಮಾಧ್ಯಮವಾಗಿದೆ.ರಾಜಕೀಯ ಹಸ್ತಕ್ಷೇಪ ಇಲ್ಲದ, ಬಂಡವಾಳ ಶಾಹಿಗಳ ನಿಯಂತ್ರಣದಲ್ಲಿರದ ಸ್ಥಳೀಯ ಆನ್ಲೈನ್ ಮಾಧ್ಯಮ ಇದಾಗಿದ್ದು ಕಡಬ ತಾಲೂಕು ಕೇಂದ್ರಿತ ಸುದ್ದಿಗಳನ್ನು ಹೆಚ್ಚು ಪ್ರಕಟಿಸುತ್ತಿದೆ. ಸ್ಥಳೀಯ ತಾಲೂಕು, ಜಿಲ್ಲೆ, ರಾಜ್ಯ, ರಾಷ್ಟ್ರದ ಪ್ರಮುಖ ವಿಚಾರಗಳನ್ನು ಪ್ರಕಟಿಸುತ್ತದೆ. ನಿಮ್ಮೂರಿನ ಸುದ್ದಿಗಳು, ಜಾಹೀರಾತು ಅಥವಾ ಸಲಹೆಗಳಿದ್ದರೆ 93804 74819 ಸಂಖ್ಯೆಯನ್ನು ಸಂಪರ್ಕಿಸಬಹುದು

ಕಡಬ ಟೈಮ್ಸ್ (KADABA TIMES); ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯದ ವ್ಯವಸ್ಥಾಪನಾ ಸಮಿತಿಯಲ್ಲಿ ಮಲೆಕುಡಿಯ ಸಮುದಾಯಕ್ಕೆ ಪ್ರಾಧಾನ್ಯತೆ ನೀಡುವಂತೆ ಮಲೆ ಕುಡಿಯರ ಸಂಘ ಸುಬ್ರಹ್ಮಣ್ಯ ವಯ ವತಿಯಿಂದ  ಮಾ.23 ರಂದು ಕುಕ್ಕೆ ಸುಬ್ರಹ್ಮಣ್ಯ ದೇವಾಲಯದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಅಯ್ಯಪ್ಪ ಸುತಗುಂಡಿ ಅವರಿಗೆ ಮನವಿ ನೀಡಲಾಗಿದ್ದು ಮನವಿ ಸಲ್ಲಿಸಿದೆ.

kadabatimes.in

ಮಲೆ ಕುಡಿಯ ಜನಾಂಗದರಿಗೂ ದೇವಸ್ಥಾನಕ್ಕೂ ಅವಿನಾಭಾವ ಸಂಬಂಧವಿದೆ. ಜಾತ್ರಾ ಮಹೋತ್ಸವದಲ್ಲಿ ಮೂಲ ಮೃತ್ತಿಕೆ ಮಲೆ ಕುಡಿಯ ಸಮುದಾಯದವರಿಗೆ ಮೊದಲು ಕೊಡುವ ಸಂಪ್ರದಾಯವಿದೆ.  ಈ ಹಿಂದಿನ ಸಂಪ್ರದಾಯದಂತೆ ಸಮಿತಿಯಲ್ಲಿ ಸುಬ್ರಹ್ಮಣ್ಯದ ಮೂಲ ನಿವಾಸಿಗಳಾದ ಮಲೆಕುಡಿಯ ಜನಾಂಗದವರಿಗೆ ಸದಸ್ಯ ಸ್ಥಾನ ನೀಡಬೇಕು. ಆದರೆ ಪ್ರಸ್ತುತ ನೀಡದೆ ಕಡೆಗಣಿಸಿ ನಮ್ಮ ಸಮುದಾಯವನ್ನು ಕಡೆಗಣಿಸಿದಂತೆ ಕಂಡುಬರುತ್ತಿದೆ.

kadabatimes.in

ಈ ಹಿಂದಿನ ಸರಕಾರಗಳ ಎಲ್ಲಾ ಅವಧಿಯಲ್ಲೂ ನಮ್ಮ ಸಮುದಾಯದ ವ್ಯಕ್ತಿಗಳಿಗೆ ಪ್ರಾಧಾನ್ಯತೆ ನೀಡುತ್ತಾ ಬರುತ್ತಿದ್ದು ಪ್ರಸ್ತುತ ಈ ಅವಧಿಯಲ್ಲಿ ಹಾಗೂ ಮುಂದಿನ ಎಲ್ಲಾ ಅವಧಿಯಲ್ಲಿ ನಮ್ಮ ಸಮುದಾಯವನ್ನು ಗಮನಿಸದೆ ಪ್ರಸ್ತಾಪನಾ ಸಮಿತಿ ರಚಿಸದಲ್ಲಿ ನಮ್ಮ ಸಮುದಾಯದ ಮೂಲ ಕೆಲಸಗಳಾದ ರಥ ಕಟ್ಟುವ ಕೆಲಸ ಸೇರಿದಂತೆ ಎಲ್ಲಾ ದೇವರ ಕೆಲಸಗಳನ್ನು ನಿಲ್ಲಿಸಿ ಪ್ರತಿಭಟಿಸುವುದಾಗಿ ಮನವಿಯಲ್ಲಿ ಉಲ್ಲೇಖಿಸಲಾಗಿದೆ.

kadabatimes.in

ನಮ್ಮ ಮನವಿ ಮನಗಂಡು ನಮ್ಮ ಮಲೆಕುಡಿಯ ಸಮುದಾಯದ ವ್ಯಕ್ತಿಗೂ ವ್ಯವಸ್ಥಾಪನಾ ಸಮಿತಿಯಲ್ಲಿ ಅವಕಾಶ ನೀಡುವಂತೆ ಕೋರಲಾಗಿದೆ. ಅಲ್ಲದೆ ಸಂಬಂಧಪಟ್ಟ ಇಲಾಖೆ ಸೂಕ್ರ ಕ್ರಮ ಕೈಗೊಳ್ಳುವಂತೆ ಈ ಮೂಲಕ ವಿನಂತಿಸಲಾಗಿದೆ ಎಂದು ತಿಳಿಸಲಾಗಿದೆ.

kadabatimes.in

ಈ ಸಂದರ್ಭದಲ್ಲಿ ಮಲೆಕುಡಿಯ ಸಂಘ ದ ವಲಯ ಸಮಿತಿ ಸುಬ್ರಹ್ಮಣ್ಯ ಅಧ್ಯಕ್ಷರಾದ ಬೆಳ್ಯಪ್ಪ ಎಂ. ಕೆ ಸುಬ್ರಹ್ಮಣ್ಯ, ಉದಯ್ ಕುಮಾರ್ ಏನೇಕಲ್ಲು, ವಾಸುದೇವ, ನಾಗೇಶ್ ಎ ವಿ, ಸುಬ್ರಹ್ಮಣ್ಯ ಪ್ರಸಾದ್ ಧನುಷ್, ಜಗದೀಶ್, ನಂದರಾಜ್, ಮುಂತಾದವರು ಉಪಸ್ಥಿತರಿದ್ದರು.

ನಿಮ್ಮೂರಿನ ಸುದ್ದಿಗಳು, ಜಾಹೀರಾತುಗಳಿಗಾಗಿ  93804 74819 ಸಂಖ್ಯೆಯನ್ನು ಸಂಪರ್ಕಿಸಬಹುದು.ಇಲ್ಲವೇ kadabatimes@gmail.com ಗೆ ಇಮೇಲ್ ಕಳುಹಿಸಬಹುದು. ನಮ್ಮನ್ನು  Facebook ಅಥವಾ Youtube ನಲ್ಲಿ ಹಿಂಬಾಲಿಸಿ.