ಕಡಬ ಸಮೀಪದ ಕಲ್ಲುಗುಡ್ಡೆ -ನಿಗನ ರಸ್ತೆಯಲ್ಲಿ ನಾಲ್ಕು ಕಾಡಾನೆಗಳ ಸಂಚಾರ

kadaba times

ಕಡಬ ಟೈಮ್ಸ್, ಪ್ರಮುಖ ಸುದ್ದಿ: ಕಡಬ ಸಮೀಪದ ನೂಜಿಬಾಳ್ತಿಲ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಲ್ಲುಗುಡ್ಡೆ -ನಿಗನ ರಸ್ತೆಯಲ್ಲಿ ಅ.15 ರ ಸಂಜೆ  ನಾಲ್ಕು ಕಾಡಾನೆಗಳು ಸಂಚರಿಸಿದ್ದು ಗ್ರಾಮಸ್ಥರು, ಸಾರ್ವಜನಿಕರು ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ.

kadaba times

ಕೆಲ ದಿನಗಳ ಹಿಂದೆ ಅರಸಿನಮಕ್ಕಿ, ಕೊಣಾಜೆ ಭಾಗದಲ್ಲಿ ಕಾಣಿಸಿಕೊಂಡಿತ್ತು. ಆನೆಗಳ ಚಲನವಲನಗಳ ಬಗ್ಗೆ ಅರಣ್ಯ ಇಲಾಖೆ ಸಿಬ್ಬಂದಿಗಳು ನಿಗಾ ವಹಿಸಿದ್ದು ಸ್ಥಳೀಯರ ಸಹಕಾರದೊಂದಿಗೆ ಆನೆಗಳ ಸಂಚಾರದ ಬಗ್ಗೆ ಮಾಹಿತಿ ನೀಡುವ ಸಲುವಾಗಿ ರಚಿಸಲಾದ  ವಾಟ್ಸಪ್ ಗ್ರೂಪ್ ಗಳಲ್ಲಿ ಮಾಹಿತಿ ರವಾನಿಸಿದ್ದಾರೆ.

ಬಹುತೇಕ ಕಡೆಗಳಲ್ಲಿ ಕೃಷಿ ತೋಟಗಳಿಗೆ ನುಗ್ಗಿದ ಕಾರಣ ಬಾಳೆಗಿಡ, ಅಡಿಕೆ ಮರಗಳಿಗೆ ಹಾನಿಯಾಗಿರುವ ಬಗ್ಗೆಯೂ ವರದಿಯಾಗಿದೆ.ಗ್ರಾಮಸ್ಥರು, ಸಾರ್ವಜನಿಕರು, ವಾಹನ ಸವಾರರು ಎಚ್ಚರಿಕೆಯಿಂದ ಸಂಚರಿಸುವಂತೆ ಅರಣ್ಯಾಧಿಕಾರಿಗಳು ಸೂಚಿಸಿದ್ದಾರೆ.

uniq
kadaba times

ಇತ್ತೀಚೆಗೆ ಕೊಕ್ಕಡದಲ್ಲಿ ಕಾಡಾನೆ ದಾಳಿಗೆ ಗ್ರಾಮಸ್ಥರೊಬ್ಬರು ಬಲಿಯಾಗಿದ್ದರು. ಶಿಶಿಲ ರಕ್ಷಿತಾ ಅರಣ್ಯ, ಪಂಜ ಅರಣ್ಯ ವಲಯದ ಹಲವು ಗ್ರಾಮಗಳಲ್ಲಿ ಕಾಡಾನೆಗಳ ಸಂಚಾರ ಹೆಚ್ಚಾಗಿದೆ.

 

Related Articles

Latest Articles