SSLC ಮತ್ತು 2nd PUC ವಿದ್ಯಾರ್ಥಿಗಳಿಗೆ ಶುಭ ಸುದ್ದಿ ನೀಡಿದ ರಾಜ್ಯ ಶಿಕ್ಷಣ ಇಲಾಖೆ

ಎಸೆಸೆಲ್ಸಿಯಲ್ಲಿ 206, ದ್ವಿತೀಯ ಪಿಯುಸಿಯಲ್ಲಿ 198 ಅಂಕ ಗಳಿಸಿದರೆ ಉತ್ತೀರ್ಣ

kadaba times

ಕಡಬ ಟೈಮ್ಸ್ (ಪ್ರಮುಖ ಸುದ್ದಿ):  ಎಸೆಸೆಲ್ಸಿ ಮತ್ತು ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ರಾಜ್ಯ ಶಿಕ್ಷಣ ಇಲಾಖೆ ಶುಭ ಸುದ್ದಿ ನೀಡಿದೆ. ಎಸೆಸೆಲ್ಸಿಯಲ್ಲಿ 625ಕ್ಕೆ ಕನಿಷ್ಠ 206 ಹಾಗೂ ದ್ವಿತೀಯ ಪಿಯುಸಿಯಲ್ಲಿ 600ಕ್ಕೆ 198 ಅಂಕಗಳನ್ನು ಗಳಿಸುವ ವಿದ್ಯಾರ್ಥಿಗಳು ಉತ್ತೀರ್ಣರಾಗಲಿದ್ದಾರೆ. ಪ್ರ ಸಕ್ತ (2025-26) ಶೈಕ್ಷಣಿಕ ಸಾಲಿನಿಂದ ಹೊಸ ನಿಯಮ ಜಾರಿಯಾಗಲಿದೆ ಎಂದು ಪ್ರಾಥಮಿಕ ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.

kadaba times
uniq

ಬೆಂಗಳೂರಿನಲ್ಲಿ  ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಸಚಿವರು, ಎಸೆಸೆಲ್ಸಿ ಪರೀಕ್ಷೆಯ ಉತ್ತೀರ್ಣತೆ ಪ್ರಮಾಣವನ್ನು 35 ರಿಂದ 33ಕ್ಕೆ ಇಳಿಕೆ ಮಾಡಲಾಗಿದೆ. ಒಟ್ಟು 625 ಅಂಕಗಳಲ್ಲಿ ಕನಿಷ್ಠ 206 ಅಂಕಗಳನ್ನು ಗಳಿಸಬೇಕು ಎಂದು ತಿಳಿಸಿದ್ದಾರೆ.

ಹೊಸ ನಿಯಮಗಳ ಪ್ರಕಾರ, ಆಂತರಿಕ ಮೌಲ್ಯಮಾಪನ ಮತ್ತು ಬಾಹ್ಯ ಪರೀಕ್ಷೆಯಲ್ಲಿ ಸರಾಸರಿ ಶೇ.33 ಅಂಕಗಳನ್ನು ಗಳಿಸಿದ ಅಭ್ಯರ್ಥಿಗಳು ಉತ್ತೀರ್ಣರಾಗಿದ್ದಾರೆ ಎಂದು ಘೋಷಿಸಲಾಗುತ್ತದೆ. ಆಯಾ ವಿಷಯದ ಒಟ್ಟು ಅಂಕಗಳಲ್ಲಿ ಪ್ರತೀ ವಿಷಯದಲ್ಲಿ ಕನಿಷ್ಠ ಶೇ.30 ಅಂಕಗಳನ್ನು ಒಳಗೊಂಡಂತೆ ಒಟ್ಟು 625 ಅಂಕಗಳಲ್ಲಿ ಕನಿಷ್ಠ 206 ಅಂಕಗಳನ್ನು ಗಳಿಸಬೇಕು ಎಂದರು.

ಹೊಸ ನಿಯಮಗಳಿಗೆ ಸಾರ್ವಜನಿಕರು ಆಕ್ಷೇಪ ಸಲ್ಲಿಸಲು ಸರಕಾರ 15 ದಿನಗಳ ಕಾಲಾವಕಾಶ ನೀಡೀತ್ತು. ಅಂಕ ಕಡಿತ ವಿಚಾರವಾಗಿ ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹಿಸಲಾಗಿದೆ. ಆ ಪೈಕಿ ಶೇ.33ರಷ್ಟು ಪರವಾಗಿ 701 ಪತ್ರ ಮತ್ತು ಶೇ.35ರಷ್ಟು ಪರವಾಗಿ 8 ಪತ್ರಗಳು ಬಂದಿದ್ದವು. ಹೀಗಾಗಿ 2025-26ನೇ ಸಾಲಿನಿಂದ ಎಸೆಸೆಲ್ಸಿಯಲ್ಲಿ ಪ್ರಥಮ ಭಾಷೆ ಹೊರತುಪಡಿಸಿ ಶೇ.33 ಫಲಿತಾಂಶ ಬಂದರೆ ವಿದ್ಯಾರ್ಥಿಗಳು ತೇರ್ಗಡೆ ಆಗಲಿದ್ದಾರೆ ಎಂದು ಅವರು ಹೇಳಿದರು.

kadaba times
kadaba times

ದ್ವಿತೀಯ ಪಿಯುಸಿ: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 600ಕ್ಕೆ 198 ಅಂಕಗಳನ್ನು ಪಡೆದರೆ ಉತ್ತೀರ್ಣರಾಗುತ್ತಾರೆ. ಯಾವುದೇ ಪ್ರಾಯೋಗಿಕ ಪರೀಕ್ಷೆ ಅಥವಾ ಆಂತರಿಕ ಮೌಲ್ಯಮಾಪನವಿಲ್ಲದ ವಿಷಯಗಳಲ್ಲಿ, 80 ಅಂಕಗಳ ಲಿಖಿತ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆಂದು ಘೋಷಿಸಲು, ಅಭ್ಯರ್ಥಿಯು ಅಂತಹ ಪ್ರತಿಯೊಂದು ವಿಷಯದಲ್ಲಿ ಕನಿಷ್ಠ 24 ಅಂಕಗಳನ್ನು ಪಡೆಯಬೇಕಾಗುತ್ತದೆ ಎಂದು ಸಚಿವರು ತಿಳಿಸಿದರು.

ದ್ವಿತೀಯ ಪಿಯುಸಿ ಪ್ರಾಯೋಗಿಕ ಪರೀಕ್ಷೆ ಅಥವಾ ಆಂತರಿಕ ಮೌಲ್ಯಮಾಪನ ಇರುವ ವಿಷಯಗಳಲ್ಲಿ, 70 ಅಂಕಗಳ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಅಭ್ಯರ್ಥಿಯು ಅಂತಹ ಪ್ರತಿಯೊಂದು ವಿಷಯದಲ್ಲೂ ಕನಿಷ್ಠ 21 ಅಂಕಗಳ ಪಡೆಯಬೇಕು.

ಪ್ರಾಯೋಗಿಕ ಅಂಶವನ್ನು ಹೊಂದಿರುವ ವಿಷಯಗಳಿಗೆ ಸಂಬಂಧಿಸಿದಂತೆ ಸಾಮಾನ್ಯ ಷರತ್ತುಗಳ ಪ್ರಕಾರ, ಪ್ರಾಯೋಗಿಕ ಪರೀಕ್ಷೆಗೆ ಅಸ್ತಿತ್ವದಲ್ಲಿರುವ 30 ಅಂಕಗಳ ಹಂಚಿಕೆಯನ್ನು ವಿಭಾಗ ಮಾಡಲಾಗುವುದು. ಅದರಂತೆ ಪ್ರಾಯೋಗಿಕ ಪರೀಕ್ಷೆಯನ್ನು ಗರಿಷ್ಠ 20 ಅಂಕಗಳಿಗೆ ನಡೆಸಲಾಗುವುದು. ಉಳಿದ 10 ಅಂಕಗಳನ್ನು ಹಾಜರಾತಿ ಸೇರಿ ಮತ್ತಿತರ ಷರತ್ತುಗಳಿಗೆ ನಿಗದಿಪಡಿಸಲಾಗಿದೆ ಎಂದು ಅವರು ತಿಳಿಸಿದರು.

Related Articles

Latest Articles