ಕಡಬ ಟೈಮ್ (KADABA TIMES): ಕುಕ್ಕೆ ಸುಬ್ರಹ್ಮಣ್ಯ:ಇಲ್ಲಿನ ಮನೆಯೊಂದರ ಬಳಿ ಭಾರೀ ಗಾತ್ರದ ಕಾಳಿಂಗ ಸರ್ಪ ಪತ್ತೆಯಾಗಿದ್ದು ಉರಗ ಪ್ರೇಮಿಯೊಬ್ಬರು ರಕ್ಷಿಸಿ ಕಾಡಿಗೆ ಸ್ಥಳಾಂತರ ಮಾಡಿದ್ದಾರೆ.


ಆಹಾರ ಅರಸಿಕೊಂಡು ಸುಬ್ರಹ್ಮಣ್ಯದ ಪ್ರಕಾಶ್ ಎಂಬವರ ಮನೆಯ ತಡೆಗೋಡೆ ಬಳಿ ಆಳವಡಿಸಲಾಗಿದ್ದ ನೀರಿ ಪೈಪ್ ಲೈನ್ ಬಳಿ ಕಾಳಿಂಗ ಸರ್ಪ ಪತ್ತೆಯಾಗಿತ್ತು. ಜನರ ಓಡಾಟದಿಂದ ತತ್ತರಗೊಂಡ ಕಾಳಿಂಗ ಅಲ್ಲೇ ಸಮೀಪದ ಬಿಲದೊಳಗೆ ಆಸರೆ ಪಡೆದಿತ್ತು.




ಆತಂಕಗೊಂಡ ಮನೆ ಮಂದಿ ಉರಗಪ್ರೇಮಿ ಮಾಧವ ಸುಬ್ರಹ್ಮಣ್ಯ ಅವರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಆಗಮಿಸಿದ ಅವರು ಸುಮಾರು 14 ಅಡಿ ಉದ್ದದ ಕಾಳಿಂಗ ಸರ್ಪವನ್ನು ಹರಸಾಹಸ ಪಟ್ಟು ಹಿಡಿದು ರಕ್ಷಿಸಿ ದಟ್ಟ ಕಾಡಿಗೆ ಬಿಟ್ಟಿರುವುದಾಗಿ ತಿಳಿದು ಬಂದಿದೆ.

