ಕಡಬ ಟೈಮ್ಸ್ (KADABA TIMES): ಭಾರೀ ಗಾಳಿ – ಮಳೆಗೆ ರಾಷ್ಟೀಯ ಹೆದ್ದಾರಿ ರಸ್ತೆ ಬದಿಯಲ್ಲಿ ನಿಲ್ಲಿಸಿದ ಕಾರಿನ ಮೇಲೆ ಮರ ಬಿದ್ದು, ಕಾರು ಜಖಂಗೊಂಡ ಘಟನೆ ಮಾ.26 ರಂದು ಸುಳ್ಯದಿಂದ ವರದಿಯಾಗಿದೆ.


ಸಂಪಾಜೆ ಗ್ರಾಮದ ಕಲ್ಲುಗುಂಡಿ ಸಮೀಪ ಟೆಕ್ಸ್ ಟೇಲ್ಸ್ ಮಾಲೀಕ ಬಿ.ಆರ್ ಪದ್ಮ್ಮಯ್ಯ ಎಂಬವರು ಕಾರನ್ನು ರಸ್ತೆಯ ಬದಿಯಲ್ಲಿ ನಿಲ್ಲಿಸಿದ್ದರು.






ಸಂಜೆ ವೇಳೆ ಸುರಿದ ಭಾರೀ ಮಳೆ – ಗಾಳಿಗೆ ಮರ ದಿಢೀರ್ ಕಾರಿನ ಮೇಲೆ ಬಿದ್ದಿದ್ದು , ಕಾರು ಜಖಂಗೊಂಡಿದೆ ಎಂದು ತಿಳಿದು ಬಂದಿದೆ.