ಕಡಬ ಟೈಮ್ಸ್(KADABA TIMES): ಕಡಬ: ಇಲ್ಲಿನ ಯೂತ್ ಫ್ರೆಂಡ್ಸ್ ಕೊರುಂದೂರು ಇದರ ವತಿಯಿಂದ ಎರಡನೇ ವರ್ಷದ ಸೌಹಾರ್ದ ಸಾಮೂಹಿಕ ಬೃಹತ್ ಇಫ್ತಾರ್ ಕೂಟವು ಮಾ.24 ರಂದು ಸಂಜೆ ವಿಜೃಂಭಣೆಯಿಂದ ನಡೆಯಿತು.


ಬಹು ಉಸ್ತಾದ್ ಮಹಮ್ಮದ್ ಮುಸ್ತಫಾ ಇರ್ಫಾನಿ ಆವರು ಎಲ್ಲರನ್ನೂ ಸ್ವಾಗತಿಸಿ, ರಮಝಾನ್ ಮನುಷ್ಯನ ಮನಸ್ಸು ಸ್ವಚ್ಛಗೊಳಿಸುವ ಆರಾಧನೆ. ಕಳೆದ ವರ್ಷವೂ ಇಫ್ತಾರ್ ಕೂಟ ನಡೆದಿದೆ, ಈ ವರ್ಷವೂ ಆಯೋಜಿಸಲಾಗಿದೆ. ಇಂತಹಾ ಸೌಹಾರ್ದ ಕಾರ್ಯಕ್ರಮಗಳು ಹೆಚ್ಚು ಹೆಚ್ಚಾಗಿ ನಡೆಯಬೇಕು. ಈ ಮೂಲಕ ಸೌಹಾರ್ದಕ್ಕೆ ಒತ್ತು ನೀಡಬೇಕು ಎಂದು ಹೇಳಿದರು.






ಕಾರ್ಯಕ್ರಮದಲ್ಲಿ ಸರ್ವ ಧರ್ಮದ ಪ್ರಮುಖರು, ಗಣ್ಯರು,ಗ್ರಾಮಸ್ಥರು ಭಾಗವಹಿಸಿದ್ದರು . ಹಲವಾರು ವಿಧದ ಪಾನೀಯ, ಹಣ್ಣು ಹಂಪಲುಗಳು, ವಿವಿಧ್ಯ ಖಾದ್ಯಗಳು ಉಣಬಡಿಸಲಾಯಿತು .ಸಂಘಟನೆಯ ಮುಂದಾಳು ಸಿದ್ದೀಕ್ ಕೊರುಂದೂರು ಕಾರ್ಯಕ್ರಮ ನಿರ್ವಹಿಸಿದರು.