ಕಡಬ ಟೈಮ್ಸ್(KADABA TIMES):ಬಿಳಿನೆಲೆ:ಇಲ್ಲಿನ ಬಿಳಿನೆಲೆ ಶ್ರೀ ಗೋಪಾಲಕೃಷ್ಣ ಪ್ರೌಢಶಾಲೆಯ 9ನೇ ತರಗತಿ ವಿದ್ಯಾರ್ಥಿನಿ ಕುಮಾರಿ ಚೈತನ್ಯ ಡಿ.ಎಂ 32ನೇ ಸಬ್ ಜೂನಿಯರ್ ವಿಭಾಗದ ರಾಷ್ಟ್ರಮಟ್ಟದ ತ್ರೋಬಾಲ್ ಪಂದ್ಯಾಟದಲ್ಲಿ ಭಾಗವಹಿಸಲಿದ್ದಾರೆ


ಛತ್ತೀಸ್ ಗಡ ಭಿಲ್ಲೈ ಎಂಬಲ್ಲಿ ಮಾ.28ರಿಂದ ಮಾ.30ರವರೆಗೆ ತ್ರೋಬಾಲ್ ಎಸೋಸಿಯೇಷನ್(ರಿ) ಕರ್ನಾಟಕ ಇದರ ವತಿಯಿಂದ ನಡೆಯಲಿದೆ.


ಈಕೆಗೆ ದೈಹಿಕ ಶಿಕ್ಷಣ ಶಿಕ್ಷಕ ಮೋನಪ್ಪ ಪಟ್ಟೆ, ಅಂತರಾಷ್ಟ್ರೀಯ ತ್ರೋಬಾಲ್ ಕ್ರೀಡಾಪಟು ಪೂರ್ಣಿಮಾ ಪಿ ದೈಹಿಕ ಶಿಕ್ಷಣ ಶಿಕ್ಷಕಿ ಹಾಗೂ ಶ್ರೀ ಗೋಪಾಲಕೃಷ್ಣ ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ವಿನಯ ಕೆ. ಇವರು ಮಾರ್ಗದರ್ಶನ ನೀಡಿದ್ದಾರೆ.


ಈಕೆ ಕೊಂಬಾರು ಗ್ರಾಮದ ಡಮ್ಮಡ್ಕ ಮೋಹಾನಂದ ಮತ್ತು ನೇತ್ರಾವತಿ ಇವರ ಪುತ್ರಿ


ಶಾಲಾ ಆಡಳಿತ ಮಂಡಳಿ, ಶಾಲಾ ಪ್ರಾಕ್ತನ ವಿದ್ಯಾರ್ಥಿ ಸಂಘ ಹಾಗೂ ಶಾಲಾ ನವನೀತ ಕ್ರೀಡಾಸಂಘದವರು ಇವರ ಸಂಪೂರ್ಣ ಖರ್ಚು – ವೆಚ್ಚಗಳನ್ನು ಭರಿಸಲಿದ್ದಾರೆ. ಶ್ರೀ ವಿದ್ಯಾ ಪ್ರಸನ್ನ ತೀರ್ಥ ಶ್ರೀಪಾದಂಗಳವರು, ಶಾಲಾ ಆಡಳಿತ ಮಂಡಳಿ ಶುಭಹಾರೈಸಿದ್ದಾರೆ.