ಕಡಬ ಟೈಮ್ಸ್(KADABA TIMES): ಸರ್ಕಾರವು ಗ್ಯಾರಂಟಿ ಯೋಜನೆಗಳ ಮೂಲಕ ಜನರಿಗೆ ಬದುಕಿಗೆ ಆಸರೆಯಾಗಿದೆ. ಪದವಿ ಮುಗಿಸಿದ ಬಳಿಕ ಸೂಕ್ತ ಉದ್ಯೋಗ ದೊರೆಯದೇ ಇರುವ ನಿರುದ್ಯೋಗಿ ಯುವಕರಿಗೆ ನೆರವಾಗುವ ದೃಷ್ಟಿಯಿಂದ ಕರ್ನಾಟಕ ಸರ್ಕಾರವು ಯುವ ನಿಧಿ ಯೋಜನೆಯನ್ನು ಪ್ರಾರಂಭಿಸಿದೆ. ನಿರುದ್ಯೋಗಿ ಯುವಕರಿಗೆ ಆರ್ಥಿಕ ನೆರವು ನೀಡುವ ಗುರಿಯನ್ನು ಹೊಂದಿದೆ, ಇದರ ಸದ್ಬಳಕೆ ಮಾಡಿಕೊಳ್ಳಿ ಎಂದು ತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಸದಸ್ಯೆ ಶ್ರೀಮತಿ ಉಷಾ ಅಂಚನ್ ಹೇಳಿದರು.


ಅವರು ಮಾ.24 ರಂದು ನೆಲ್ಯಾಡಿಯ ವಿಶ್ವ ವಿದ್ಯಾಲಯ ಕಾಲೇಜಿನ ಮಾನವಿಕ ಸಂಘ ಮತ್ತು ‘ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ’ ವತಿಯಿಂದ ಆಯೋಜನೆಗೊಂಡ ‘ಯುವನಿಧಿ ಮಾಹಿತಿ ಕಾರ್ಯಗಾರ ಉದ್ಘಾಟಿಸಿ ಮಾತನಾಡಿದರು.


ಈ ಯೋಜನೆಗಳು ಫಲಾನುಭವಿಗಳಿಗೆ ಸೂಕ್ತವಾಗಿ ತಲುಪಬೇಕು. ಹಾಗಾಗಿ ಈ ಇಂತಹ ಮಾಹಿತಿ ಕಾರ್ಯಾಗಾರವನ್ನು ಆಯೋಜಿಸಲಾಗುತ್ತಿದೆ . ಈ ಯೋಜನೆಯ ಮೂಲಕ ಆರ್ಥಿಕ ಸ್ವಾತಂತ್ರ್ಯ ನೀಡುವ ಜೊತೆಗೆ ನಿರುದ್ಯೋಗಿ ಯುವಕರ ಆತ್ಮವಿಶ್ವಾಸ ಮತ್ತು ನೈತಿಕತೆಯನ್ನು ಹೆಚ್ಚಿಸಲು ಪ್ರಯತ್ನಿಸುತ್ತದೆ ಎಂದರು.


ಪಂಚಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸದಸ್ಯ ಅವಿನಾಶ ಬೈತಡ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಂಗಳೂರು ಉದ್ಯೋಗ ವಿನಿಮಯ ಕೇಂದ್ರದ ಕೌನ್ಸಿಲರ್ ಶ್ರೀಮತಿ ಮಂಜೂಷ, ಯುವನಿಧಿ ಯೋಜನೆ ಕುರಿತ ಮಾಹಿತಿ ಒದಗಿಸಿದರು.ಕಾಲೇಜಿನ ಮಾನವಿಕ ಸಂಘದ ಸಂಚಾಲಕ ಡಾ. ಸೀತಾರಾಮ ಪಿ. ಅಧ್ಯಕ್ಷತೆ ವಹಿಸಿದ್ದರು.


ವೇದಿಕೆಯಲ್ಲಿ ವಿ.ವಿ ಕಾಲೇಜಿನ ಸಂಯೋಜಕ ಡಾ. ಸುರೇಶ್ ಉಪಸ್ಥಿತಿತರಿದ್ದರು. ಉಪನ್ಯಾಸಕ ಡಾ. ನೂರಂದಪ್ಪ ಸ್ವಾಗತಿಸಿ ಉಪನ್ಯಾಸಕಿ ಶ್ರೀಮತಿ ಶ್ರುತಿ ಧನ್ಯವಾದ ಸಮರ್ಪಿಸಿದರು.ವಿದ್ಯಾರ್ಥಿನಿಯರು ಪ್ರಾರ್ಥನೆ ನೆರವೇರಿಸಿದರು. ಉಪನ್ಯಾಸಕಿ ಶ್ರೀಮತಿ ಚಂದ್ರಕಲಾ ನಿರ್ವಹಿಸಿದರು. ಈ ವೇಳೆ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಸದಸ್ಯರು, ಕಾಲೇಜಿನ ಬೋಧಕ, ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.