ಕಡಬ ಟೈಮ್( KADABA TIMES): ಕುಕ್ಕೆ ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಸಂಬಂಧಿಸಿದ ಜಾಗವೊಂದು ನ್ಯಾಯಾಲಯದ ಮೂಲಕ ಮತ್ತೆ ದೇವಾಲಯದ ಸುಪರ್ದಿಗೆ ಬಂದಿದೆ.


ಇದೀಗ ಆ ಜಾಗದಲ್ಲಿದ್ದ ಅದರಲ್ಲಿದ್ದ ಕಟ್ಟಡದ ತೆರವು ಕಾರ್ಯವು ಈ ದೇವಾಲಯದ ಅಧಿಕಾರಿಗಳು, ಸಿಬ್ಬಂದಿಗಳು ಭದ್ರತಾ ಸಿಬ್ಬಂದಿಗಳ ಉಪಸ್ಥಿತಿಯಲ್ಲಿ ನಡೆದಿದೆ.




ಸುಬ್ರಹ್ಮಣ್ಯದ ಕಾಶಿಕಟ್ಟೆ ರಥಬೀದಿಯ ಮಧ್ಯೆ ಅಂಚೆ ಕಚೇರಿ ಮುಂಭಾಗದಲ್ಲಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಹಾಗೂ ಕುಂಞಕ್ಕ ಎಂಬವರಿಗೆ ಜಾಗದ ತಕರಾರು ಇತ್ತು. ಅದಕ್ಕೆ ಸಂಬಂಧಿಸಿದ ತಕರಾರು ನ್ಯಾಯಾಲಯದಲ್ಲಿದ್ದು, ಈ ಪ್ರಕರಣ ನ್ಯಾಯಾಲಯದಲ್ಲಿ ಇತ್ಯರ್ಥವಾಗಿದ್ದು, ಜಾಗವು ದೇವಸ್ಥಾನಕ್ಕೆ ಸಂಬಂಧಿಸಿದ ಜಾಗವೆಂದು ಆದೇಶವಾಗಿತ್ತು.


ಇದರನ್ವಯ ಸುಳ್ಯ ನ್ಯಾಯಲಯದ ಆದೇಶಿಕ ಜ್ಯಾರಿಕಾರರು(ಅಮೀನ್) ಹಾಗೂ ನ್ಯಾಯಾಲಯದ ಸಿಬಂದಿ ಖುದ್ದಾಗಿ ಹಾಜರಿದ್ದರು. ಈ ಸ್ಥಳವನ್ನು ಇದೀಗ ದೇವಾಲಯಕ್ಕೆ ಹಸ್ತಾಂತರಿಸಲಾಗಿದೆ.