21.4 C
Kadaba
Wednesday, March 26, 2025

ಹೊಸ ಸುದ್ದಿಗಳು

ಲಾಭಿ ನಡೆಸಲು, ಬೆಂಗಳೂರಿಗೆ ಹೋಗಲು ನನ್ನ ಬಳಿ ಹಣ ಇಲ್ಲ:ವ್ಯವಸ್ಥಾಪನಾ ಸಮಿತಿಯಲ್ಲಿ ನನಗೂ ಒಂದು ಅವಕಾಶ ಕೊಡಿ- ಲಕ್ಷ್ಮೀ ಸುಬ್ರಹ್ಮಣ್ಯ

Must read

Kadabatimes
Kadabatimeshttps://kadabatimes.in
ಕಡಬ ಟೈಮ್ಸ್ ಒಂದು ಸ್ವತಂತ್ರ ಡಿಜಿಟಲ್ ಮಾಧ್ಯಮವಾಗಿದೆ.ರಾಜಕೀಯ ಹಸ್ತಕ್ಷೇಪ ಇಲ್ಲದ, ಬಂಡವಾಳ ಶಾಹಿಗಳ ನಿಯಂತ್ರಣದಲ್ಲಿರದ ಸ್ಥಳೀಯ ಆನ್ಲೈನ್ ಮಾಧ್ಯಮ ಇದಾಗಿದ್ದು ಕಡಬ ತಾಲೂಕು ಕೇಂದ್ರಿತ ಸುದ್ದಿಗಳನ್ನು ಹೆಚ್ಚು ಪ್ರಕಟಿಸುತ್ತಿದೆ. ಸ್ಥಳೀಯ ತಾಲೂಕು, ಜಿಲ್ಲೆ, ರಾಜ್ಯ, ರಾಷ್ಟ್ರದ ಪ್ರಮುಖ ವಿಚಾರಗಳನ್ನು ಪ್ರಕಟಿಸುತ್ತದೆ. ನಿಮ್ಮೂರಿನ ಸುದ್ದಿಗಳು, ಜಾಹೀರಾತು ಅಥವಾ ಸಲಹೆಗಳಿದ್ದರೆ 93804 74819 ಸಂಖ್ಯೆಯನ್ನು ಸಂಪರ್ಕಿಸಬಹುದು

ಕಡಬ ಟೈಮ್ಸ್(KADABA TIMES): ನಾನು 37 ವರ್ಷದಿಂದ ಕಾಂಗ್ರೆಸ್ ಪಕ್ಷದಲ್ಲಿ ತೊಡಗಿಕೊಂಡಿದ್ದೇನೆ ,  ಲಾಭಿ ನಡೆಸಲು  ಬೆಂಗಳೂರಿಗೆ ಹೋಗಲು ನನ್ನ ಬಳಿ ಹಣ ಇಲ್ಲ ಆದ್ದರಿಂದ ನನಗೂ ಒಂದು ಅವಕಾಶ ಕೊಡಿ  ಎಂದು ಕಾಂಗ್ರೆಸ್ ಕಾರ್ಯಕರ್ತೆ  ಲಕ್ಷ್ಮೀ ಸುಬ್ರಹ್ಮಣ್ಯ ಹೇಳಿಕೆ ನೀಡಿದ್ದಾರೆ.

kadabatimes.in

ಕುಕ್ಕೆ ಸುಬ್ರಹ್ಮಣ್ಯ ದೇವಾಲಯದ ವ್ಯವಸ್ಥಾಪನಾ ಸಮಿತಿಯಲ್ಲಿ ಆದಿ ದ್ರಾವಿಡ ಜನಾಂಗವನ್ನು ಪರಿಗಣಿಸುವಂತೆ ಕೇಳಿಕೊಂಡಿರುವ ಇವರು  ಸಮಿತಿಯಲ್ಲಿ ಪರಿಶಿಷ್ಟ ಜನಾಂಗದವರನ್ನು  ವಿಶೇಷವಾಗಿ ಪರಿಗಣಿಸಿ ಎಂದು ವಿನಂತಿಸಿದ್ದಾರೆ.

kadabatimes.in
kadabatimes.in

ನಾನು ಕಾಂಗ್ರೆಸ್ ನ ಸುಳ್ಯ ತಾಲೂಕು ಬ್ಲಾಕ್ ನ ಪ್ರಧಾನ ಕಾರ್ಯದರ್ಶಿಯಾಗಿ, ಎಸ್.ಸಿ ಘಟಕದ ಅಧ್ಯಕ್ಷಳಾಗಿ, ಗ್ರಾ.ಪಂ ಸದಸ್ಯಳಾಗಿ ಕೆಲಸ ಮಾಡಿದ್ದೇನೆ. ಈ ಭಾರಿ ವ್ಯವಸ್ಥಾಪನಾ ಸಮಿತಿಯಲ್ಲಿ ಸದಸ್ಯತನ ಕೊಡಿಸುವುದಾಗಿ ಮಾಜಿ ಸಚಿವ ರಮಾನಾಥ ರೈ ಭರವಸೆ ನೀಡಿದ್ದರು.

kadabatimes.in

ಹೆಚ್ಚಿನ ಎಲ್ಲಾ ಸರ್ಕಾರಿ  ಸಮಿತಿಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ  ಅವಕಾಶ ಇದೆ.  ಅದೇ ರೀತಿ ವ್ಯವಸ್ಥಾಪನಾ ಸಮಿತಿಯಲ್ಲೂ ಎರಡಕ್ಕೂ ಅವಕಾಶ ಕೊಡಿ.ನಮ್ಮ ಸುಬ್ರಹ್ಮಣ್ಯದಲ್ಲಿ ನಮ್ಮವರದ್ದು 48 ಮನೆಗಳುವೆ ನಮಗೂ ಅವಕಾಶ ಕಲ್ಪಿಸಿ ಈ ಭಾರಿಯಾದರೂ ವ್ಯವಸ್ಥಾಪನಾ ಸಮಿತಿಯಲ್ಲಿ ಅವಕಾಶ ಕೊಡಿಸಿ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ನಿಮ್ಮೂರಿನ ಸುದ್ದಿಗಳು, ಜಾಹೀರಾತುಗಳಿಗಾಗಿ  93804 74819 ಸಂಖ್ಯೆಯನ್ನು ಸಂಪರ್ಕಿಸಬಹುದು.ಇಲ್ಲವೇ kadabatimes@gmail.com ಗೆ ಇಮೇಲ್ ಕಳುಹಿಸಬಹುದು. ನಮ್ಮನ್ನು  Facebook ಅಥವಾ Youtube ನಲ್ಲಿ ಹಿಂಬಾಲಿಸಿ.