ಕಡಬ ಟೈಮ್ಸ್ (KADABA TIMES); ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯದ ವ್ಯವಸ್ಥಾಪನಾ ಸಮಿತಿಯಲ್ಲಿ ಮಲೆಕುಡಿಯ ಸಮುದಾಯಕ್ಕೆ ಪ್ರಾಧಾನ್ಯತೆ ನೀಡುವಂತೆ ಮಲೆ ಕುಡಿಯರ ಸಂಘ ಸುಬ್ರಹ್ಮಣ್ಯ ವಯ ವತಿಯಿಂದ ಮಾ.23 ರಂದು ಕುಕ್ಕೆ ಸುಬ್ರಹ್ಮಣ್ಯ ದೇವಾಲಯದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಅಯ್ಯಪ್ಪ ಸುತಗುಂಡಿ ಅವರಿಗೆ ಮನವಿ ನೀಡಲಾಗಿದ್ದು ಮನವಿ ಸಲ್ಲಿಸಿದೆ.


ಮಲೆ ಕುಡಿಯ ಜನಾಂಗದರಿಗೂ ದೇವಸ್ಥಾನಕ್ಕೂ ಅವಿನಾಭಾವ ಸಂಬಂಧವಿದೆ. ಜಾತ್ರಾ ಮಹೋತ್ಸವದಲ್ಲಿ ಮೂಲ ಮೃತ್ತಿಕೆ ಮಲೆ ಕುಡಿಯ ಸಮುದಾಯದವರಿಗೆ ಮೊದಲು ಕೊಡುವ ಸಂಪ್ರದಾಯವಿದೆ. ಈ ಹಿಂದಿನ ಸಂಪ್ರದಾಯದಂತೆ ಸಮಿತಿಯಲ್ಲಿ ಸುಬ್ರಹ್ಮಣ್ಯದ ಮೂಲ ನಿವಾಸಿಗಳಾದ ಮಲೆಕುಡಿಯ ಜನಾಂಗದವರಿಗೆ ಸದಸ್ಯ ಸ್ಥಾನ ನೀಡಬೇಕು. ಆದರೆ ಪ್ರಸ್ತುತ ನೀಡದೆ ಕಡೆಗಣಿಸಿ ನಮ್ಮ ಸಮುದಾಯವನ್ನು ಕಡೆಗಣಿಸಿದಂತೆ ಕಂಡುಬರುತ್ತಿದೆ.


ಈ ಹಿಂದಿನ ಸರಕಾರಗಳ ಎಲ್ಲಾ ಅವಧಿಯಲ್ಲೂ ನಮ್ಮ ಸಮುದಾಯದ ವ್ಯಕ್ತಿಗಳಿಗೆ ಪ್ರಾಧಾನ್ಯತೆ ನೀಡುತ್ತಾ ಬರುತ್ತಿದ್ದು ಪ್ರಸ್ತುತ ಈ ಅವಧಿಯಲ್ಲಿ ಹಾಗೂ ಮುಂದಿನ ಎಲ್ಲಾ ಅವಧಿಯಲ್ಲಿ ನಮ್ಮ ಸಮುದಾಯವನ್ನು ಗಮನಿಸದೆ ಪ್ರಸ್ತಾಪನಾ ಸಮಿತಿ ರಚಿಸದಲ್ಲಿ ನಮ್ಮ ಸಮುದಾಯದ ಮೂಲ ಕೆಲಸಗಳಾದ ರಥ ಕಟ್ಟುವ ಕೆಲಸ ಸೇರಿದಂತೆ ಎಲ್ಲಾ ದೇವರ ಕೆಲಸಗಳನ್ನು ನಿಲ್ಲಿಸಿ ಪ್ರತಿಭಟಿಸುವುದಾಗಿ ಮನವಿಯಲ್ಲಿ ಉಲ್ಲೇಖಿಸಲಾಗಿದೆ.


ನಮ್ಮ ಮನವಿ ಮನಗಂಡು ನಮ್ಮ ಮಲೆಕುಡಿಯ ಸಮುದಾಯದ ವ್ಯಕ್ತಿಗೂ ವ್ಯವಸ್ಥಾಪನಾ ಸಮಿತಿಯಲ್ಲಿ ಅವಕಾಶ ನೀಡುವಂತೆ ಕೋರಲಾಗಿದೆ. ಅಲ್ಲದೆ ಸಂಬಂಧಪಟ್ಟ ಇಲಾಖೆ ಸೂಕ್ರ ಕ್ರಮ ಕೈಗೊಳ್ಳುವಂತೆ ಈ ಮೂಲಕ ವಿನಂತಿಸಲಾಗಿದೆ ಎಂದು ತಿಳಿಸಲಾಗಿದೆ.


ಈ ಸಂದರ್ಭದಲ್ಲಿ ಮಲೆಕುಡಿಯ ಸಂಘ ದ ವಲಯ ಸಮಿತಿ ಸುಬ್ರಹ್ಮಣ್ಯ ಅಧ್ಯಕ್ಷರಾದ ಬೆಳ್ಯಪ್ಪ ಎಂ. ಕೆ ಸುಬ್ರಹ್ಮಣ್ಯ, ಉದಯ್ ಕುಮಾರ್ ಏನೇಕಲ್ಲು, ವಾಸುದೇವ, ನಾಗೇಶ್ ಎ ವಿ, ಸುಬ್ರಹ್ಮಣ್ಯ ಪ್ರಸಾದ್ ಧನುಷ್, ಜಗದೀಶ್, ನಂದರಾಜ್, ಮುಂತಾದವರು ಉಪಸ್ಥಿತರಿದ್ದರು.