ಕಡಬ ಟೈಮ್,ಪಟ್ಟಣ ಸುದ್ದಿ: ಬಸ್ ನಿಲ್ಲಿಸಿ ರಸ್ತೆ ದಾಟುತ್ತಿದ್ದ ಚಾಲಕನಿಗೆ ಕಾರೊಂದು ಡಿಕ್ಕಿ ಹೊಡೆದು ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಕಡಬದಿಂದ ವರದಿಯಾಗಿದೆ.


ಮಾ.6 ರಂದು ಮುಂಜಾನೆ ರಾಮಚಂದ್ರ ನಾಯ್ಕ ರವರು ಚಾಲಕರಾಗಿ ಪುತ್ತೂರಿನಿಂದ ಕಡಬಕ್ಕೆ ಬಂದು ಬಳಿಕ ಕಡಬದಿಂದ ಸುಳ್ಯಕ್ಕೆ ಹೋಗುವ ಸಲುವಾಗಿ ಬಸ್‌ನ್ನು ಬಸ್ ನಿಲ್ದಾಣದಲ್ಲಿ ನಿಲ್ಲಿಸಿ ನಿರ್ವಾಹಕ ಮುನೀಶ್ವರನ್ ಟಿಸಿ ಪಾಯಿಂಟ್‌ನಲ್ಲಿ ಟಿಸಿಯೊಂದಿಗೆ ಮಾತನಾಡಿಕೊಂಡಿರುವ ವೇಳೆ ಚಾಲಕ ಹೋಟೇಲ್‌ಗೆ ಹೋಗಿ ವಾಶ್ ರೂಮ್‌ಗೆ ಹೋಗುತ್ತಿರುವಾಗ ಉಪ್ಪಿನಂಗಡಿ – ಸುಬ್ರಹ್ಮಣ್ಯ ಡಾಮಾರು ರಸ್ತೆಯನ್ನು ದಾಟಿ ಹೋಗುತ್ತಿರುವಾಗ ಕಡಬ ಕಡೆಯಿಂದ ಸುಬ್ರಹ್ಮಣ್ಯ ಕಡೆಗೆ ಹೋಗುತ್ತಿದ್ದ ಕಾರು ಡಿಕ್ಕಿ ಹೊಡೆದಿದೆ.


ಡಿಕ್ಕಿ ಹೊಡೆದ ಪರಿಣಾಮ ಬಸ್ ಚಾಲಕ ರಸ್ತೆಗೆ ಬಿದ್ದಿದ್ದು ಅವರನ್ನು ಉಪಚರಿಸಿ ಎಡ ಕಾಲಿಗೆ ಹಾಗೂ ಬಲ ಕಾಲಿಗೆ ಸೊಂಟಕ್ಕೆ ಎರಡೂ ಕೈಗಳಿಗೆ ನೋವುಂಟಾಗಿರುತ್ತದೆ. ಗಾಯಾಳು ಪುತ್ತೂರು ಖಾಸಗಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿ ಚಿಕಿತ್ಸೆ ಪಡೆದುಕೊಂಡಿದ್ದಾರೆ.


ಈ ಬಗ್ಗೆ ಅಪಘಾತವೆಸಗಿದ ಕಾರು ಚಾಲಕನ ಹೆಸರು ಆಸ್ಪಾಕ್ ಎಂಬುದಾಗಿ ತಿಳಿದು ಬಂದಿದ್ದು ಕಾರಿನ ಚಾಲಕ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿ ಅಪಘಾತವೆಸಗಿದ ಬಗ್ಗೆ ನಿರ್ವಾಹಕ ಮುನೀಶ್ವರನ್ ಎಂಬವರು ನೀಡಿದ ದೂರಿನಂತೆ ಪೊಲೀಸ್ ಠಾಣಾ ಅ.ಕ್ರ 16/2025 ಕಲಂ: 281,125(a) BNS-2023ಯಂತೆ ಪ್ರಕರಣ ದಾಖಲಾಗಿದೆ.

