24.4 C
Kadaba
Tuesday, April 1, 2025

ಹೊಸ ಸುದ್ದಿಗಳು

ಕುಕ್ಕೆ ಸುಬ್ರಹ್ಮಣ್ಯ: ಅನ್ನಛತ್ರಕ್ಕೆ ಹೋಗುತ್ತಿದ್ದ ಕಾಲೇಜು ವಿದ್ಯಾರ್ಥಿನಿಯ ದೇಹ ಸ್ಪರ್ಶಿಸಿ ಅಶ್ಲೀಲ ವರ್ತನೆ: ವ್ಯಕ್ತಿಯ ವಿರುದ್ದ ಪ್ರಕರಣ ದಾಖಲಿಸಿಕೊಂಡ ಪೊಲೀಸರು

ಕಡಬ ಟೈಮ್ಸ್ ವೆಬ್ ತಾಣದಲ್ಲಿ ಸುದ್ದಿಗಳನ್ನು ಪರಿಶೀಲಿಸಿಯೇ ಪ್ರಕಟಿಸಲಾಗುತ್ತಿದೆ. ಒಂದು ವೇಳೆ ಆಪೇಕ್ಷಾರ್ಹ, ಅಥವಾ ತಪ್ಪು ಮಾಹಿತಿಗಳು ಕಂಡು ಬಂದಲ್ಲಿ ಇಲ್ಲವೇ ಸಲಹೆಗಳಿದ್ದರೆ  ಸಂಪಾದಕರ ದೂರವಾಣಿ ಸಂಖ್ಯೆ 93804 74819 ಸಂಖ್ಯೆಯನ್ನು ಸಂಪರ್ಕಿಸಬಹುದು.

Must read

 

kadabatimes.in
ಸುಬ್ರಹ್ಮಣ್ಯ ಪೊಲೀಸ್ ಠಾಣೆಯ ಚಿತ್ರ

kadabatimes.in

ಕುಕ್ಕೆ ಸುಬ್ರಹ್ಮಣ್ಯ :
ಪೂಜೆಯಲ್ಲಿ ಪಾಲ್ಗೊಂಡು  ಬೋಜನಾ ಶಾಲಾ ಬಳಿ ನಿಂತಿದ್ದ ಕಾಲೇಜು ವಿದ್ಯಾರ್ಥಿನಿಯ ದೇಹ
ಸ್ಪರ್ಶಿಸಿ  ಅಶ್ಲೀಲ ವರ್ತನೆ ತೋರಿದ ವ್ಯಕ್ತಿಯ ವಿರುದ್ದ
ಸುಬ್ರಹ್ಮಣ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಕಾಲೇಜೊಂದರಲ್ಲಿ
ವಿದ್ಯಾಭ್ಯಾಸ  ಮಾಡಿಕೊಂಡಿದ್ದ ಯುವತಿ ದೀಪಾವಳಿ ಹಿನ್ನೆಲೆ
ತನ್ನ ಮನೆಗೆ ಬಂದಿದ್ದರು. ನ.2 ರಂದು ರಾತ್ರಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಡೆಯುತ್ತಿದ್ದ
ಪೂಜೆಯಲ್ಲಿ ಭಾಗವಹಿಸಿ ಮನೆಯವರ ಜೊತೆ  ಬೋಜನಾ ಶಾಲೆಯತ್ತ
ತೆರಳಿದ್ದರು.

kadabatimes.in



ಸಂದರ್ಭದಲ್ಲಿ  ಊಟಕ್ಕೆ ಕುಳಿತುಕೊಳ್ಳಲು ಗೋಡೆ ಬದಿ
ನಿಂತು ಕಾಯುತ್ತಿರುವಾಗ ಅಲ್ಲೇ ಪಕ್ಕದಲ್ಲಿ ಓಡಾಟ ಮಾಡುತ್ತಿದ್ದ   ಆರೋಪಿ  ಶಿವರಾಮ
ಭಟ್ ಎಂಬಾತ ಯುವತಿಯ ಎದೆ ಭಾಗಕ್ಕೆ ಕೈ ಹಾಕಿ ದೈಹಿಕ ಹಿಂಸೆ ನೀಡಿರುವುದಾಗಿ ಆರೋಪಿಸಲಾಗಿದೆ .ಅಲ್ಲದೆ
ಪ್ರಶ್ನಿಸಿದಕ್ಕೆ ಆರೋಪಿ ಅವಾಚ್ಯ ಶಬ್ದ ಗಳಿಂದ ಬೈದಿರುವುದಾಗಿ ದೂರಲಾಗಿದೆ. ಈತ ಸುಬ್ರಹ್ಮಣ್ಯದಲ್ಲೇ ಜೆರಾಕ್ಸ್ ಅಂಗಡಿಯೊಂದನ್ನು  ಇಟ್ಟುಕೊಂಡಿದ್ದು ದೇಗುಲ ಪರಿಸರದಲ್ಲಿ ಆಗಾಗ ಕಾಣಿಸಿಕೊಳ್ಳುತ್ತಿದ್ದ .


ಯುವತಿಯ ದೂರನ್ನು ಪರಿಶೀಲಿಸಿ  ಸುಬ್ರಹ್ಮಣ್ಯ ಪೊಲೀಸರು ಭಾರತೀಯ ನ್ಯಾಯ ಸಂಹಿತಾ ಕಾಯ್ದೆಯಡಿ
(   BNS ACT -75,352 ಕಾಲಂ)  ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

kadabatimes.in


ನಿಮ್ಮೂರಿನ ಸುದ್ದಿಗಳು, ಜಾಹೀರಾತುಗಳಿಗಾಗಿ  93804 74819 ಸಂಖ್ಯೆಯನ್ನು ಸಂಪರ್ಕಿಸಬಹುದು.ಇಲ್ಲವೇ kadabatimes@gmail.com ಗೆ ಇಮೇಲ್ ಕಳುಹಿಸಬಹುದು. ನಮ್ಮನ್ನು  Facebook ಅಥವಾ Youtube ನಲ್ಲಿ ಹಿಂಬಾಲಿಸಿ.