

![]() ![]() |
ವಿದ್ಯಾವರ್ಧಕ ಸಂಘದ ಅಧ್ಯಕ್ಷರಿಂದ ಜವಾಬ್ದಾರಿ ಹಸ್ತಾಂತರ |


ಕಡಬ: ವಿವೇಕಾನಂದ ವಿದ್ಯಾವರ್ಧಕ ಸಂಘ. (ರಿ) ಪುತ್ತೂರು ಇದರ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ
ಕಡಬದ ಸರಸ್ವತೀ
ವಿದ್ಯಾಲಯ ಸಮೂಹ ಸಂಸ್ಥೆಗಳ ಸಂಚಾಲಕಿಯಾಗಿ
ಶ್ರೀ ಮತಿ ಸವಿತಾ ಶಿವ ಸುಬ್ರಹ್ಮಣ್ಯ ಭಟ್ ಜವಾಬ್ದಾರಿ
ವಹಿಸಿಕೊಂಡಿದ್ದಾರೆ.
ವಿವೇಕಾನಂದ
ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ್ ಭಟ್ ಕಲ್ಲಡ್ಕ ಅವರು ಇತ್ತೀಚೆಗೆ ಜವಾಬ್ದಾರಿ
ಹಸ್ತಾರಿಸಿದರು.
ಇತ್ತೀಚೆಗೆ
ಅಪಘಾತವೊಂದರಲ್ಲಿ ಮೃತಪಟ್ಟ ವಿದ್ಯಾವರ್ಧಕ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭಾಸ್ಕರ್ ಅವರ ಸ್ಥಾನಕ್ಕೆ ಈ
ಹಿಂದೆ ಸಂಚಾಲಕರಾಗಿದ್ದ ವೆಂಕಟ್ರಮಣ ರಾವ್ ಮಂಕುಡೆ ಅವರಿಗೆ
ಜವಾಬ್ದಾರಿ ನೀಡಲಾಗಿದೆ.


ಶ್ರೀ
ಮತಿ ಸವಿತಾ ಶಿವ ಸುಬ್ರಹ್ಮಣ್ಯ ಭಟ್ ಅವರು ಕೋಡಿಂಬಾಳ
ಗ್ರಾಮದ ಪಾಜೋವಿನವರು . ಬಿಳಿನೆಲೆ ಮತ್ತು ಕುಕ್ಕೆ ಸುಬ್ರಹ್ಮಣ್ಯದಲ್ಲಿ ವಿದ್ಯಾಭ್ಯಾಸ ಪೂರೈಸಿದ್ದಾರೆ.
ಗ್ರಾಮ ವಿಕಾಸ ಯೋಜನೆಯಲ್ಲಿ ಮಹಿಳಾ ಸಂಯೋಜಕಿ ಸೇರಿದಂತೆ
ವಿವಿಧ ಸಂಘ ಸಂಸ್ಥೆಗಳಲ್ಲಿ ಸಾಮಾಜಿಕವಾಗಿ ತೊಡಗಿಕೊಂಡಿದ್ದಾರೆ. 2004 ರಿಂದಲೇ
ಸರಸ್ವತಿ ವಿದ್ಯಾಲಯದ ಕಾರ್ಯ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದರು. ಬಳಿಕ 2007 ರ ನಂತರ ಶಿಶು ಮಂದಿರದ
ಮೇಲುಸ್ತುವಾರಿಯಾಗಿದ್ದರು.
ಕಡಬ
ಟೈಮ್ ಜೊತೆ ಮಾತನಾಡಿದ ಶ್ರೀ ಮತಿ ಸವಿತಾ ಶಿವ ಸುಬ್ರಹ್ಮಣ್ಯ
ಭಟ್ ಅವರು ಇದೊಂದು ಅನೀರಿಕ್ಷಿತ ಜವಾಬ್ದಾರಿ ನನಗೆ ಸಿಕ್ಕಿದೆ. ಎಲ್ಲರ ಸಹಕಾರದೊಂದಿಗೆ ಸಂಸ್ಥೆಯ ಬೆಳವಣಿಗೆಗೆ ನಿರಂತರ ಪ್ರಯತ್ನ ಮಾಡುತ್ತೇನೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

