24.4 C
Kadaba
Thursday, April 3, 2025

ಹೊಸ ಸುದ್ದಿಗಳು

ಇದ್ದಕ್ಕಿದ್ದಂತೆ ದೇವಾಲಯಗಳು ವಕ್ಫ್ ಆಸ್ತಿಯಾಗಿದ್ದು ಹೇಗೆ? – ಪೇಜಾವರ ಶ್ರೀ ಪ್ರಶ್ನೆ

ಕಡಬ ಟೈಮ್ಸ್ ವೆಬ್ ತಾಣದಲ್ಲಿ ಸುದ್ದಿಗಳನ್ನು ಪರಿಶೀಲಿಸಿಯೇ ಪ್ರಕಟಿಸಲಾಗುತ್ತಿದೆ. ಒಂದು ವೇಳೆ ಆಪೇಕ್ಷಾರ್ಹ, ಅಥವಾ ತಪ್ಪು ಮಾಹಿತಿಗಳು ಕಂಡು ಬಂದಲ್ಲಿ ಇಲ್ಲವೇ ಸಲಹೆಗಳಿದ್ದರೆ  ಸಂಪಾದಕರ ದೂರವಾಣಿ ಸಂಖ್ಯೆ 93804 74819 ಸಂಖ್ಯೆಯನ್ನು ಸಂಪರ್ಕಿಸಬಹುದು.

Must read

 

kadabatimes.in
ಪೇಜಾವರ ಶ್ರೀಗಳು(Kadaba times)

ಕಡಬ ಟೈಮ್ : ಇದ್ದಕ್ಕಿದ್ದಂತೆ ದೇವಾಲಯಗಳು ವಕ್ಫ್  (Waqf Land row) ಆಸ್ತಿಯಾಗಿದ್ದು ಹೇಗೆ ಎಂದು ಪೇಜಾವರ
ಶ್ರೀಗಳು (Pejavara
Vishwaprasanna Tirtha Swamiji)
ಸರ್ಕಾರಕ್ಕೆ ಪ್ರಶ್ನಿಸಿದ್ದಾರೆ.

kadabatimes.in


ದಾವಣಗೆರೆಯಲ್ಲಿ (Davanagere) ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ವೇಳೆ, ದೇವಾಲಯಗಳು ಇದ್ದಕ್ಕಿದ್ದಂತೆ ವಕ್ಫ್ ಆಸ್ತಿಯಾಗುತ್ತಿವೆ. ಜನರಿಗೆ ಇಷ್ಟು ಭಯ ಹಾಗೂ ಗೊಂದಲ
ಉಂಟುಮಾಡುವ ಕೆಲಸ ಮಾಡಬಾರದು. ಆದಷ್ಟು ಒಳ್ಳೆಯ ಕೆಲಸಗಳನ್ನು ಮಾಡಬೇಕು ಎಂದು ಸರ್ಕಾರಕ್ಕೆ ಕಿವಿಮಾತು ಹೇಳಿದ್ದಾರೆ.


ರೈತರ ಜಮೀನು, ಮಠಗಳ ಆಸ್ತಿಯಲ್ಲಿ ವಕ್ಫ್
ಹೆಸರು ಕಾಣಿಸಿಕೊಳ್ಳುತ್ತಿದೆ. ನಮ್ಮಲ್ಲಿ ಧಾರ್ಮಿಕ ದತ್ತಿ ಇಲಾಖೆಯ
ಅಡಿ ಅನೇಕ ದೇವಾಲಯಗಳಿವೆ. ಮೊದಲು ಅವುಗಳ ಆಸ್ತಿ
ರಕ್ಷಣೆಗೆ ಮುಂದಾಗಬೇಕು. ದೇವಸ್ಥಾನದ ಆಸ್ತಿಗಳನ್ನು ದೇವರ ಹೆಸರಿನಲ್ಲಿ ನೋಂದಣಿ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

kadabatimes.in


ನಾವು ನಮ್ಮ ದೇಶ ಎಂದು ತಿಳಿದು
ಸಹ ಇಷ್ಟು ದಿನ ಸುಮ್ಮನೇ ಇದ್ದೇವೆ. ಅದ್ದರಿಂದ ಹಂತಹಂತವಾಗಿ ಆಸ್ತಿ
ಪರಭಾರೆಯಾಗುತ್ತಿದೆ. ಹಾಸನದಲ್ಲಿ ಈಗ ದೇವಸ್ಥಾನದ ಆಸ್ತಿಯನ್ನು ದೇವರ ಹೆಸರಿಗೆ ಮಾಡಿಕೊಳ್ಳಲು ಮುಂದಾಗಿದ್ದಾರೆ. ಅದೇ ರೀತಿ ಎಲ್ಲಾ ಕಡೆ ಮಾಡಬೇಕು. ಪರಭಾರೆ
ಮಾಡಿ ಕೊಡುವ ಕೆಲಸ ಯಾರು ಮಾಡಿದ್ದು ಏಕೆ ಮಾಡಿದ್ದು ಎಂದು ತಿಳಿಯಬೇಕು. ವಿಚಾರದಲ್ಲಿ ತಪ್ಪು
ಮಾಡಿದವರಿಗೆ ಕಾನೂನಾತ್ಮಕವಾಗಿ ಶಿಕ್ಷೆ
ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.


ವಕ್ಫ್
ವಿವಾದದ ವಿಚಾರವಾಗಿ, ಕೇಂದ್ರ
ಸರ್ಕಾರದ ತಂಡ ರಾಜ್ಯಕ್ಕೆ ಭೇಟಿ ನೀಡಿರುವುದು ತುಂಬಾ
ಒಳ್ಳೇಯ ಕೆಲಸವಾಗಿದೆ. ಇನ್ನೂ
ಜಾತಿಗಣತಿ ಬಗ್ಗೆ ನಾವೇನು
ಹೇಳಲು ಹೋಗುವುದಿಲ್ಲ ಎಂದಿದ್ದಾರೆ.

kadabatimes.in


ನಿಮ್ಮೂರಿನ ಸುದ್ದಿಗಳು, ಜಾಹೀರಾತುಗಳಿಗಾಗಿ  93804 74819 ಸಂಖ್ಯೆಯನ್ನು ಸಂಪರ್ಕಿಸಬಹುದು.ಇಲ್ಲವೇ kadabatimes@gmail.com ಗೆ ಇಮೇಲ್ ಕಳುಹಿಸಬಹುದು. ನಮ್ಮನ್ನು  Facebook ಅಥವಾ Youtube ನಲ್ಲಿ ಹಿಂಬಾಲಿಸಿ.