

![]() ![]() |
ಶ್ರೀಮತಿ ಜೇಸಿಂತಾ ವೇಗಸ್ ಮತ್ತು ಶ್ರೀ ಗಿರಿಧರ್ ರೈ ಉದ್ಘಾಟಿಸುತ್ತಿರುವುದು |


ಕಡಬ
: ಕಡಬದ ಸೈಂಟ್ ಆನ್ಸ್ ಶಾಲೆಯಲ್ಲಿ ಮಧ್ಯಾಹ್ನ
ಬಿಸಿಯೂಟ ಯೋಜನೆ ಇಂದಿನಿಂದ ಪ್ರಾರಂಭಗೊಂಡಿದೆ.
ಸಂಸ್ಥೆಯ
ಈ ಮಹತ್ವಕಾಂಕ್ಷಿ ಯೋಜನೆಯ ಉದ್ಘಾಟನೆಯನ್ನು ಸೈಂಉದ್ಟ್ಗ್ ಜೋಕಿಮ್ ಚರ್ಚ್ ಪಾಲನಾ ಮಂಡಳಿಯ ಕಾರ್ಯದರ್ಶಿ ಶ್ರೀಮತಿ ಜೇಸಿಂತಾ ವೇಗಸ್ ಮತ್ತು ರಕ್ಷಕ -ಶಿಕ್ಷಕ ಸಂಘದ
ಉಪಾಧ್ಯಕ್ಷ ಶ್ರೀ ಗಿರಿಧರ್ ರೈ ನೆರವೇರಿಸಿದರು.


ಸಂಸ್ಥೆಯ
ಸಂಚಾಲಕ ವಂದನೀಯ ಪ್ರಕಾಶ್ ಪೌಲ್ ಡಿಸೋಜಾ ದೇವರ
ಆಶೀರ್ವಚನವನ್ನು ನೆರವೇರಿಸಿ ಶಾಲೆಯಲ್ಲಿ ಮಕ್ಕಳಿಗೆ ಉತ್ತಮ ಪೋಷಕಾಂಶ ಭರಿತ ಆಹಾರವನ್ನು ಒದಗಿಸುವ
ದೃಷ್ಟಿಯಿಂದ ಈ ಯೋಜನೆ ರೂಪಿಸಲಾಗಿದೆ ಎಂದರು.
ರಕ್ಷಕ
ಶಿಕ್ಷಕ ಸಂಘದ ಪದಾಧಿಕಾರಿಗಳು, ಶಿಕ್ಷಕ – ಶಿಕ್ಷಕೇತರ ವೃಂದದವರು ಮತ್ತು ಪೋಷಕರು ಉಪಸ್ಥಿತರಿದ್ದರು.
ಸಂಸ್ಥೆಯ
ಪ್ರಾಂಶುಪಾಲರಾದ ವಂದನೀಯ ಅಮಿತ್ ಪ್ರಕಾಶ್ ರೋಡ್ರಿಗಸ್
ಸ್ವಾಗತಿಸಿ ನಿರೂಪಿಸಿದರು. ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕಿ ಶ್ರೀಮತಿ ದಕ್ಷ ವಂದಿಸಿದರು.

